ತಿರುವನಂತಪುರಂ: ರಾಜ್ಯದಲ್ಲಿ ಮಧುಮೇಹ ಚಿಕಿತ್ಸೆಗಾಗಿ ಇನ್ಸುಲಿನ್ ಮಾರಾಟ ಮಾಡಲು ಸಪ್ಲೈಕೋ ಸಿದ್ಧತೆ ನಡೆಸಿದೆ. ಇನ್ಸುಲಿನ್ ನ್ನು ಶೇಕಡಾ 25 ರಷ್ಟು ರಿಯಾಯಿತಿ ದರದಲ್ಲಿ ಸಪ್ಲೈಕೋ ವೈದ್ಯಕೀಯ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಆಹಾರ ಸಚಿವ ಜಿ ಆರ್ ಅನಿಲ್ ತಿಳಿಸಿದ್ದಾರೆ.
ಸೆಪ್ಟೆಂಬರ್ 1 ರಿಂದ ರಿಯಾಯಿತಿ ಮಾರಾಟ ಆರಂಭಗೊಳ್ಳಲಿದೆ. ದೇಶದಲ್ಲೇ ಅತಿ ಹೆಚ್ಚು ಮಧುಮೇಹ ಹೊಂದಿರುವ ರಾಜ್ಯಗಳಲ್ಲಿ ಕೇರಳವು ಒಂದು. ಮಧುಮೇಹ ಚಿಕಿತ್ಸೆಯು ಸಾಮಾನ್ಯ ಜನರಿಗೆ ದೊಡ್ಡ ವೆಚ್ಚದಾಯಕವಾಗಿ ಚಿಕಿತ್ಸೆಗೆ ತೊಡಕುಗಳಾಗುತ್ತಿದೆ.
ಕೋವಿಡ್ ಬಿಕ್ಕಟ್ಟಿನ ಇಂದಿನ ಸಂದರ್ಭ ಔಷಧಕ್ಕಾಗಿ ಹಣ ಹೊಂದಿಸಲು ಅನೇಕರು ಹೆಣಗಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಪ್ಲೈಕೋ ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದೆ.