ಮಂಜೇಶ್ವರ: ಕರ್ನಾಟಕ ರಾಜ್ಯ ಗಡಿ ಬಂದ್ ಮಾಡಿದ್ದು ಕೇರಳ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೋವಿಡ್ ಹರಡುವುದನ್ನೂ ಬೇಕಾದ ರೀತಿಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗದ ಕೇರಳ ಸರ್ಕಾರ ತನ್ನ ಆರೋಗ್ಯ ಇಲಾಖೆಯ ವೈಫಲ್ಯವನ್ನು ಮರೆಮಾಚಲು ಕರ್ನಾಟಕ ಸರ್ಕಾರವನ್ನು ಗಡಿ ವಿಷಯದಲ್ಲಿ ದೂಶಿಸುವುದು ಸರಿ ಅಲ್ಲ. ತಲಪಾಡಿಯಲ್ಲಿ ಪ್ರತಿಭಟನೆ ಮಾಡುವ ಬದಲು ಗಡಿ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಲು ಪ್ರಯತ್ನಿಸಬೇಕು. ಇದನ್ನು ಮಂಜೇಶ್ವರ ಮಂಡಲ ಬಿಜೆಪಿ ನಾಯಕರು ಮತ್ತು ಜಿಲ್ಲಾ ನಾಯಕರು ಮಾಡುತ್ತಿರುವರು. 2 ಡೋಸ್ ವ್ಯಾಕ್ಸಿನೇಷನ್ ಮಾಡಿದವರನ್ನು ಗಡಿಯಲ್ಲಿ ಬಿಡಬೇಕು ಎಂಬುದೇ ನಮ್ಮ ಆಶಯ. ಇದನ್ನು ಬಿಟ್ಟು ಕೇರಳ ಸರ್ಕಾರದ ವೈಫಲ್ಯ ವನ್ನು ಮರೆಮಾಚಲು ಪ್ರತಿಭಟನೆ ಮಾಡುವ ಕಾಯಕವನ್ನು ಇತರ ಪಕ್ಷದ ನಾಯಕರು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಗಡಿಯಲ್ಲಿ ತಪಾಸಣೆ ಮಾಡುವುದು. ಆರೋಗ್ಯ ಇಲಾಖೆ ಅಥವಾ ವಿದ್ಯಾಭ್ಯಾಸ ಇಲಾಖೆ ಆಗಿರಲಿ ಹಾಗೂ ಇನ್ನಿತರ ದೈನಂದಿನ ಉದ್ಯೋಗ ಯಾವುದೇ ಸಮಸ್ಯೆಗೂ ಕರ್ನಾಟಕವನ್ನು ಅವಲಂಬಿಸುವ ಸ್ಥಿತಿ ಮಂಜೇಶ್ವರ ಗಡಿ ಭಾಗದ್ದು. ಇಲ್ಲಿ ನಮಗೆ ಬೇಕಾದ ಯಾವುದೇ ಆಧುನಿಕ ಸೌಲಭ್ಯ ಬಿಡಿ ಕನಿಷ್ಠ ಪಕ್ಷ ಗಡಿ ದಾಟಲು ಒಂದು ಪುಕ್ಕಟೆ ಟೆಸ್ಟ್ ಮಾಡಿ ಕೊಡಲು ನಮಗೆ ಕರ್ನಾಟಕ ಸರ್ಕಾರವೇ ಬೇಕು. ಹಾಗಿರುವಾಗ ತನ್ನ ಸ್ವಂತ ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸಾಧ್ಯವಿಲ್ಲದೆ ಗಡಿ ನಿಯಂತ್ರಣದ ಹೆಸರಲ್ಲಿ ಕರ್ನಾಟಕ ಸರ್ಕಾರವನ್ನು ವಿಮರ್ಶೆ ಮಾಡುವುದು ಸರ್ಕಾರದ ಕೋವಿಡ್ ನಿಯಂತ್ರಣ ವೈಫಲ್ಯವನ್ನು ಮರೆಮಾಚುವ ಪ್ರಯತ್ನ. ಗಡಿ ಸಮಸ್ಯೆಯನ್ನು ಸಂಬಂದಿಸಿದ ಅಧಿಕಾರಿಗಳೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಬಿಜೆಪಿ ಮಂಡಲ ಮತ್ತು ಜಿಲ್ಲಾ ಸಮಿತಿ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ತಿಳಿಸಿದೆ.