ತಿರುವನಂತಪುರಂ: ರಾಜ್ಯದಲ್ಲಿ ಇಂದು 30,203 ಮಂದಿಗೆ ಸೋಂಕು ಪತ್ತೆಯಾಗಿದೆ. ಮಲಪ್ಪುರಂ 3576, ಎರ್ನಾಕುಳಂ 3548, ಕೊಲ್ಲಂ 3188, ಕೋಝಿಕ್ಕೋಡ್, 3066, ತ್ರಿಶೂರ್ 2806, ಪಾಲಕ್ಕಾಡ್ 2672, ತಿರುವನಂತಪುರ 1980, ಕೋಟ್ಟಯಂ 1938, ಕಣ್ಣೂರು 1927, ಆಲಪ್ಪುಳ 1833, ಪತನಂತಿಟ್ಟ 1251, ವಯನಾಡು 1044, ಇಡುಕ್ಕಿ 906, ಕಾಸರಗೋಡು 468 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 1,60,152 ಮಾದರಿಗಳನ್ನು ಪರಿಶೀಲಿಸಲಾಗಿದೆ. ಟೆಸ್ಟ್ ಪಾಸಿಟಿವಿಟಿ ದರ ಶೇ.18.86 ಆಗಿದೆ. ರುಟೀನ್ ಮಾದರಿ, ಸೆಂಟಿನಲ್ ಮಾದರಿ, ಸಿಬಿ ನಾಟ್, ಟ್ರೂನಾಟ್, ಪಿ.ಒ.ಸಿ.ಟಿ. ಪಿ.ಸಿ.ಆರ್., ಆರ್.ಟಿ. ಎಲ್.ಎಮ್.ಪಿ.ಪಿ, ಆಂಟಿಜನ್ ತಪಾಸಣೆ ಸೇರಿದಂತೆ ಒಟ್ಟು 3,15,52,681 ಮಾದರಿಗಳನ್ನು ಪರಿಶೀಲಿಸಲಾಗಿದೆ.
ಪ್ರತಿವಾರದ ಜನಸಂಖ್ಯೆ ಆಧಾರಿತ ಸೋಂಕು ರೇಶ್ಯೊಯೋ (ಡಬ್ಲ್ಯುಐಪಿಆರ್) ಆಧಾರವಾಗಿ ಸ್ಥಳೀಯಾಡಳಿತ ಪ್ರದೇಶಗಳನ್ನು ವರ್ಗೀಕರಿಸಿದೆ. 81 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 215 ವಾರ್ಡನ್‍ಗಳಲ್ಲಿ ಡಬ್ಲ್ಯೂಪಿ.ಪಿ.ಆರ್. (ಟಿಪಿಆರ್)ಎಂಟಕ್ಕಿಂತ ಹೆಚ್ಚಿದ್ದು, ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಕಳೆದ 24 ಗಂಟೆಗಳಲ್ಲಿ 115 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಮೃತರಾದವರ ಸಂಖ್ಯೆ 20,788 ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ದೃಢೀಕರಿಸಿದವರಲ್ಲಿ 147 ಮಂದಿ ಹೊರ ರಾಜ್ಯದಿಂದ ಬಂದವರು. 28,419 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿತು. 1521 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರ 3425, ಎರ್ನಾಕುಳಂ 3466, ಕೊಲ್ಲಂ 3179, ಕೋಝಿಕ್ಕೋಡ್ 3030, ತ್ರಿಶೂರ್ 2788, ಪಾಲಕ್ಕಾಡ್ 1628, ತಿರುವನಂತಪುರ 1878, ಕೊಟ್ಟಾಯಂ 1812, ಕಣ್ಣೂರು 1846, ಆಲಪ್ಪುಳ 1786, ಪತ್ತನಂತಿಟ್ಟ 1229, ವಯನಾಡು 1022, ಇಡುಕ್ಕಿ 874, ಕಾಸರಗೋಡು 456 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 116 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 21, ವಯನಾಡು 17, ಪಾಲಕ್ಕಾಡ್ 15, ಇಡುಕ್ಕಿ 12, ಕಾಸರಗೋಡು 10, ಕೊಲ್ಲಂ, ಎರ್ನಾಕುಳಂ 8, ತಿರುವನಂತಪುರ, 10, ಪತ್ತನಂತಿಟ್ಟು 7, ತ್ರಿಶೂರ್ 6,ಕೋಝಿಕ್ಕೋಡ್ 3, ಆಲಪ್ಪುಳ, ಮಲಪ್ಪುರಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ಸೋಂಕು ದೃಢಪಟ್ಟು ಚಿಕಿತ್ಸೆಯಲ್ಲಿರುವ 20,687 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ತಿರುವನಂತಪುರ 1194, ಕೊಲ್ಲಂ 1765, ಪತ್ತನಂತಿಟ್ಟ 743, ಆಲಪ್ಪುಳ 1049, ಕೊಟ್ಟಾಯಂ 1428, ಇಡುಕ್ಕಿ 422, ಎರ್ನಾಕುಳಂ 2020, ತ್ರಿಶೂರ್ 2602, ಪಾಲಕ್ಕಾಡ್ 2417, ಮಲಪ್ಪುರಂ 2532, ಕೋಝಿಕ್ಕೋಡ್ 2709, ವಯನಾಡು 526, ಕಣ್ಣೂರು 875, ಕಾಸರಗೋಡು 405 ಎಂಬಂತೆ ರೋಗಮುಕ್ತರಾಗಿದ್ದಾರೆ. 2,18,892 ಮಂದಿ ಚಿಕಿತ್ಸೆಯಲ್ಲಿದ್ದಾರೆ. 38,17,004 ಮಂದಿ ಈವರೆಗೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳÀಲ್ಲಿ 5,45,393 ಮಂದಿ ಈಗಲೂ ನಿರೀಕ್ಷಣೆಯಲ್ಲಿದ್ದಾರೆ. ಇವರಿನಲ್ಲಿ 5,13,686 ಮಂದಿ ಮನೆ/ವಿವಿಧ ಆರೈಕೆ ಕೇಂದ್ರಗಳಲ್ಲಿ ಮತ್ತು 31,707 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. 2698 ಮಂದಿಯನ್ನು ಇಂದು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.