ಉಪ್ಪಳ: ಕಣ್ಣೂರು-ಮಂಗಳೂರು ಅನ್ ರಿಸರ್ವ್(ಕಾಯ್ದಿರಿಸದ) ಎಕ್ಸ್‍ಪ್ರೆಸ್-ವಿಶೇಷ ರೈಲು ಸೇವೆ ಆ.30 ರಿಂದ ಆರಂಭಗೊಳ್ಳಲಿದೆ. ಕೋವಿಡ್ ನಿಂದಾಗಿ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಿದ್ದ ಈ ರೈಲು ಸೇವೆ ಇದೀಗ ಮತ್ತೆ ಕೌಂಟರ್‍ಗಳ ಮೂಲಕ ಕಾಯ್ದಿರಿಸದ ಟಿಕೆಟ್ ವಿತರಣೆಯನ್ನು ರೈಲ್ವೇ ಪುನರಾರಂಭಿಸುತ್ತಿದೆ. ಕೌಂಟರ್ ಟಿಕೆಟ್‍ಗಳ ಪುನರಾರಂಭವು ತ್ವರಿತ ಟಿಕೆಟ್ ಲಭ್ಯತೆಯನ್ನು ಸಹ ಸುಲಭಗೊಳಿಸುತ್ತದೆ. ಇದು ಹೆಚ್ಚಿನ ಪ್ರಯಾಣಿಕರಿಗೆ ಮತ್ತೆ ರೈಲಿನಲ್ಲಿ ಪ್ರಯಾಣಿಸಲು ಬೆಂಬಲ ನೀಡಿದಂತಾಗಿದೆ. ರೈಲ್ವೆಯ ಆದಾಯವೂ ಇದರಿಂದ ಹೆಚ್ಚಳಗೊಳ್ಳಲಿದೆ.
ಹೊಸ ರೈಲು ಸೇವೆಯನ್ನು ಕೋವಿಡ್ ಪೂರ್ವ ಕಾಲದಲ್ಲಿದ್ದ ನಿಲ್ದಾಣಗಳಾದ ಚಿರಕ್ಕಲ್, ಚಂದೇರ ಮತ್ತು ಕಳನಾಡು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ನಿಲ್ದಾಣಗಳನ್ನು ಅವಲಂಬಿಸಿರುವ ಪ್ರಯಾಣಿಕರ ಕೋರಿಕೆಯ ಮೇರೆಗೆ ಅದನ್ನು ಮರುಸ್ಥಾಪಿಸಲಾಗಿದೆ.
ಇದರ ಜೊತೆಗೆ, ಕುಂಬಳೆ, ಉಪ್ಪಳ ಮತ್ತು ಮಂಜೇಶ್ವರ ನಿಲ್ದಾಣಗಳನ್ನು ಬೆಳಿಗ್ಗೆ 9: 30 ಕ್ಕೆ ತಲುಪಲಿದೆ ಎಂದು ಅ|ಧಿಕೃತರು ತಿಳಿಸಿದ್ದಾರೆ. ಇದರಿಂದ ವಿವಿಧ| ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಅಸಂಖ್ಯ ಜನರಿಗೆ ನೆರವಾಗಲಿದೆ. ಸೇವ್ ಉಪ್ಪಳ ರೈಲ್ವೇ ಸ್ಟೇಷನ್ ಸಮಿತಿ ಈ ಬಗ್ಗೆ ಕಳೆದ ಅನೇಕ ಕಾಲಗಳಿಂದ ಈ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೇಟ್ ಸೇವೆ ಮತ್ತು ನಿಲುಗಡೆಗೆ ಮನವಿ ಸಲ್ಲಿಸುತ್ತಿತ್ತು.
ರೈಲು ಕಣ್ಣೂರಿನಿಂದ ಅಕ್ಟೋಬರ್ 30 ರಂದು ಬೆಳಿಗ್ಗೆ 07:40 ಕ್ಕೆ ಹೊರಟು ಕುಂಬಳೆ ನಿಲ್ದಾಣಕ್ಕೆ ಬೆಳಿಗ್ಗೆ 09:45 ಕ್ಕೆ, ಉಪ್ಪಳಕ್ಕೆ ಬೆಳಿಗ್ಗೆ 09:53 ಕ್ಕೆ ಮತ್ತು ಮಂಜೇಶ್ವರಕ್ಕೆ ಬೆಳಿಗ್ಗೆ 10:02 ಕ್ಕೆ ತಲುಪಲಿದೆ. ರೈಲು ಅಕ್ಟೋಬರ್ 31 ರಂದು ಸಂಜೆ ಮಂಗಳೂರಿನಿಂದ ಹೊರಟು ರಾತ್ರಿ 8.30 ಕ್ಕೆ ಕಣ್ಣೂರು ತಲುಪಲಿದೆ. ಹೊಸ ರೈಲುಗಾಡಿಯಲ್ಲಿ ಹನ್ನೆರಡು ಜನರಲ್ ಕೋಚ್‍ಗಳು ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್‍ಗಳನ್ನು ಒಳಗೊಂಡಿರುತ್ತದೆ.
ಮಲಬಾರ್ ಸ್ಪೆಷಲ್ ಎಕ್ಸ್‍ಪ್ರೆಸ್ ಮತ್ತು ಮಂಗಳೂರು-ಕೊಯಮತ್ತೂರು ಎಕ್ಸ್‍ಪ್ರೆಸ್-ರೈಲುಗಳಲ್ಲಿ ಮೀಸಲು ಇಲ್ಲದ ಕೋಚ್‍ಗಳನ್ನು ಅನುಮತಿಸಬೇಕೆಂದು ಸೇವ್ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿ ಒತ್ತಾಯಿಸಿತ್ತು. ಸಮಿತಿಯು ಕಣ್ಣೂರು-ಮಂಗಳೂರು ವಿಭಾಗದಲ್ಲಿ ತಕ್ಷಣ ಮೆಮು ಸೇವೆಯನ್ನು ಆರಂಭಿಸಲು ಸಮಿತಿ ಒತ್ತಾಯಿಸಿದೆ.