ಬೆಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಭೇಟಿ ನೀಡುವ ಎಲ್ಲರಿಗೂ ತೀವ್ರತರವಾದ ಕೋವಿಡ್ ನಿಬಂಧನೆಗಳನ್ನು ಕರ್ನಾಟಕ ಸರ್ಕಾರ ಹೇರಲಿದೆ. ವಿವಿಧ ರೈಲುಗಳಲ್ಲಿ ಬರುವ ಎಲ್ಲಾ ಪ್ರಯಾಣಿಕರ ಮತ್ತು ರೈಲ್ವೆ ಕಂಪಾರ್ಟ್ ಮೆಂಟ್ ಗಳಲ್ಲಿ ನಗರಸಭೆಯ ಅಧೀನದಲ್ಲಿರುವ ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ. ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಿದರೂ ಅದರ ಜೊತೆಗೆ ರೈಲ್ವೇ ನಿಲ್ದಾಣದಲ್ಲಿ ಮತ್ತೆ ಪರೀಕ್ಷೆ ನಡೆಯುತ್ತದೆ.
ಟೆಸ್ಟ್ ಫಲಿತಾಂಶ ಒಂದೇ ದಿನದಲ್ಲಿ ಲಭ್ಯವಾಗುತ್ತದೆ. ಫಲಿತಾಂಶ ಪಾಸಿಟಿವ್ ಆಗಿದ್ದರೆ ಕಾರಂಟೈನ್ ಗೆ ಒಳಗಾಗಬೇಕಾಗುತ್ತದೆ. ಬಳಿಕ ಏಳು ದಿನಗಳ ನಂತರ ಪರೀಕ್ಷೆಯನ್ನು ನಡೆಸಿ ನೆಗಟಿವ್ ಆಗಿದ್ದರೆ ಮಾತ್ರ ಕ್ವಾರಂಟೈನ್ ನಿಂದ ಮುಕ್ತಗೊಳಿಸಲಾಗುತ್ತದೆ. ಇಂದು ನಡೆಸಿದ ತಪಾಸಣೆಯಲ್ಲಿ 38 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಕರ್ನಾಟಕದ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಪರೀಕ್ಷೆಯನ್ನು ಕಠಿಣಗೊಳಿಸಲಾಗಿದೆ. ಬಾಧಿತರ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಮತ್ತು ಕ್ವಾರಂಟೈನ್ ಮಾಡಲು ಹೋಟೆಲ್‍ಗಳು ಮತ್ತು ಆರೈಕೆ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಆದರೆ ವಿದ್ಯಾರ್ಥಿಗಳಿಗೆ ಈ ಕ್ವಾರಂಟೈನ್ ನಿಂದ ವಿನಾಯ್ತಿ ಅನುಮತಿಸಲಾಗಿದೆ. ವೈದ್ಯಕೀಯ, ಪ್ಯಾರಾಮೆಡಿಕಲ್, ನಸಿರ್ಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿನಾಯ್ತಿ ಇದ್ದು, ಇವರಿಗೆ ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಮಾತ್ರ ಸಾಕು. ಇತರ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ, ಇತರ ಅಗತ್ಯಗಳಿಗೆ ಕರ್ನಾಟಕಕ್ಕೆ ಆಗಮಿಸುವವರಿಗೆ ಪರೀಕ್ಷೆ ನಡೆಸಿ ಬಳಿಕ ಪಾಸಿಟಿವ್ ಇದ್ದರೆ ಕ್ವಾರಂಟೈನ್ ಮಾಡುವಂತೆ ಸರ್ಕಾರವು ಬಿಡುಗಡೆ ಮಾಡಿದ ಸೂಚನೆಯಲ್ಲಿ ಹೇಳಲಾಗಿದೆ.