ತಿರುವನಂತಪುರ: ಸಮಾಜಿಕ ಕಲ್ಯಾಣ ಪಿಂಚಣಿ ವಿತರಣೆಯು ಓಣಂ ಹಬ್ಬಕ್ಕೆ ಮುನ್ನ ಆರಂಭವಾಗಲಿದೆ. ಪಿಂಚಣಿ ವಿತರಣೆಗಾಗಿ `1481.87 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಇಂದು ಮಾಹಿತಿ ನೀಡಿರುವರು.
ಆಗಸ್ಟ್ 10 ರೊಳಗೆ ವಿತರಣೆಯನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಂತಿಮ ಪಟ್ಟಿಯ ಪ್ರಕಾರ, 48,52,098 ಮಂದಿ ಫಲಾನುಭವಿಗಳಿದ್ದಾರೆ.
24.85 ಲಕ್ಷ ಜನರು ನೇರವಾಗಿ ಬ್ಯಾಂಕ್ ಖಾತೆಗಳ ಮೂಲಕ ಪಿಂಚಣಿ ಪಡೆಯುತ್ತಾರೆ ಮತ್ತು ಉಳಿದವರು ಸಹಕಾರಿ ಬ್ಯಾಂಕುಗಳ ಮೂಲಕ ಪಿಂಚಣಿ ಪಡೆಯುತ್ತಾರೆ. ಫಲಾನುಭವಿಗಳು ಈ ತಿಂಗಳು 3200 ರೂ. ಗಳಂತೆ ಪ್ರತಿಯೊಬ್ಬ ಪಿಂಚಣಿದಾರರಿಗೂ ಈ ತಿಂಗಳು ಪಿಂಚಣಿ ಲಭಿಸಲಿದೆ.