HEALTH TIPS

ಕೇರಳಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು

            ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 3ನೇ ಅಲೆ ಆರಂಭವಾಗುವ ಎಚ್ಚರಿಕೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ.

             ಆದರೆ ರಾಜ್ಯ ಸರ್ಕಾರವು ಇದನ್ನು ಮೂರನೇ ಅಲೆ ಎಂದು ಅಧಿಕೃತವಾಗಿ ಕರೆದಿಲ್ಲ, ಆದರೆ ಜುಲೈ 4 ರಿಂದ ಪ್ರತಿ ದಿನವೂ 12 ರಿಂದ 14 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.

          ಜುಲೈನಿಂದ ದಿನನಿತ್ಯ 20 ರಿಂದ 22 ಸಾವಿರದವರೆಗೆ ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ಗಮನಿಸಿದರೆ ಈಗಾಗಲೇ ಕೊರೊನಾ ಮೂರನೇ ಅಲೆ ಆರಂಭವಾದಂತೆ ಗೋಚರಿಸುತ್ತದೆ.

         ಇದೀಗ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ, 3ನೇ ಅಲೆ ಬರುತ್ತಿದೆ.. ಅದಕ್ಕೆ ರೆಡಿಯಾಗಿ ಎಂದು ತಜ್ಞ ವೈದ್ಯರು ಹಿಂದಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಆಗಸ್ಟ್‌ನಲ್ಲಿ ಮೂರನೇ ಅಲೆ ಹೊಡೆತ ನೀಡಲಿದೆ ಎಂದು ಸರ್ಕಾರಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದರು.. ಆದರೂ ಬಕ್ರೀದ್ ಸಂದರ್ಭದಲ್ಲಿ ಮೂರು ದಿನ ಅವಕಾಶ ನೀಡಿದ್ದೇ ಕೊರೊನಾ ಹೆಚ್ಚಾಗಲು ಕಾರಣ.

           ಕೇರಳದಲ್ಲಿ ಕಳೆದ ನಾಲ್ಕು ದಿನಗಳಿಂದ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದ್ರೂ.. ಜನ ರಿವೇಂಜ್ ಟೂರಿಸಂ ನೆಪದಲ್ಲಿ ಪ್ರವಾಸಿ ತಾಣಗಳಿಗೆ ಮುಗಿ ಬೀಳಲು ಶುರು ಮಾಡಿದ್ದಾರೆ.

ಕೊರೊನಾ ಭೀತಿ ನಡುವೆಯೇ ಕೇರಳದಲ್ಲಿ ಜೈಕಾ ವೈರಸ್‌ ಸೋಂಕಿನ 10 ಪ್ರಕರಣಗಳು ವರದಿಯಾಗಿವೆ. ತಿರುವನಂತಪುರಂ ನಿವಾಸಿಗರಲ್ಲಿ ಫ್ಲಾವಿ ವೈರಸ್‌ ಪತ್ತೆಯಾಗಿದ್ದು, ಜ್ವರ, ತಲೆನೋವು, ಮೈಕೈ ನೋವು ಚರ್ಮದ ಮೇಲೆ ಕಲೆಗಳ ಲಕ್ಷಣಗಳು ಜೋರಾಗಿವೆ. ''ಸೊಳ್ಳೆಗಳ ಮೂಲಕ ಹರಡುವ ಈ ಸೋಂಕು, ಗರ್ಭಿಣಿಯರಲ್ಲಿ ಕಾಣಿಸಿಕೊಂಡಲ್ಲಿ ಶಿಶುವಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ," ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

            ಕೇರಳದ ಜತೆಗೆ ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ನಿಧಾನವಾಗಿ ಏರಿಕೆ ಕಾಣುತ್ತಿವೆ. ಕೊಲ್ಹಾಪುರ, ಪುಣೆ ಗ್ರಾಮೀಣ, ಸಾಂಗ್ಲಿ, ಸತಾರ, ರತ್ನಗಿರಿ, ಸಿಂಧುದುರ್ಗ್‌, ರಾಯಘಡ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರವು ರಾಜ್ಯದ ಸರಾಸರಿಗಿಂತ ಹೆಚ್ಚಿದೆ.

         ಈ ನಿಟ್ಟಿನಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌, ಸಂಚಾರಗಳಿಗೆ ಕಠಿಣ ನಿರ್ಬಂಧ ಹೇರುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಲಸಿಕಾ ಅಭಿಯಾನ ನಡೆಸಿ , ಪ್ರಕರಣಗಳ ಸಂಖ್ಯೆ ನಿಯಂತ್ರಣ ತಪ್ಪದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸಿಎಂ ನಿರ್ದೇಶಿಸಿದ್ದಾರೆ.

        ಕೊರೊನಾ ಸೋಂಕಿಗೆ ತುತ್ತಾದವರು ನಿರ್ದಿಷ್ಟ ಕಾಲಾವಧಿ ಹೋಂ ಐಸೊಲೇಷನ್‌ನಲ್ಲಿರದೆ ಹೊರಗೆ ಸುತ್ತಾಡುತ್ತಿರುವುದು ಕಂಡುಬರುತ್ತಿದೆ. ಇದು ಸೋಂಕು ಅತಿ ವೇಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಲು ಬಹುಮುಖ್ಯ ಕಾರಣವಾಗಿದೆ ಎಂದು ತಂಡ ಅಭಿಪ್ರಾಯ ಪಟ್ಟಿದೆ.

             ಸದ್ಯಕ್ಕೆ ಕೇರಳದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಪ್ರಾಥಮಿಕ ಪರಿಶೀಲನಾ ಅಂಶಗಳನ್ನು ಉಲ್ಲೇಖಿಸಿದ್ದು, ಶೀಘ್ರವೇ ತನ್ನ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ತಿಳಿಸಿದೆ.

ಕೇರಳದಲ್ಲಿ ಕೊರೊನಾ ಪ್ರಕರಣಗಳು ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ 12-13% ಪಾಸಿಟಿವಿಟಿ ದರ ಇದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ 17% ಇದೆ. ಇಂಥ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ತಂಡ ಅಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡುತ್ತಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಗ್ಗಿ, ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಆದರೆ ಕೇರಳದಲ್ಲಿ ಮಾತ್ರ ಹೀಗಾಗಿಲ್ಲ. ಎರಡು ವಾರದಿಂದೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದ್ದು, ಮೂರನೇ ಅಲೆಯ ಆತಂಕಕ್ಕೂ ಎಡೆ ಮಾಡಿಕೊಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries