ತಿರುವನಂತಪುರ: ಆನ್‍ಲೈನ್‍ನಲ್ಲಿ ಸರಕುಗಳನ್ನು ಆರ್ಡರ್ ಮಾಡುವವರನ್ನು ವಂಚಿಸುವ ದೂರುಗಳು ದಿನೇದಿನೇ ಹೆಚ್ಚುತ್ತಿರುವುದು ಕೇಳಿಬಂದಿದೆ. ನಾವು ಬಹಳ ದುಬಾರಿ ವಸ್ತುಗಳನ್ನು ಆರ್ಡರ್ ಮಾಡಿದಾಗ, ಅದರ ಕಾಲು ಭಾಗದ ಮೌಲ್ಯವಿರದ ವಸ್ತುಗಳು ಅಮೂಲ್ಯ ವಸ್ತುಗಳಂತೆ ಬರುತ್ತದೆ. ಅಂತಹ ಗ್ರಾಹಕರ ಅನುಭವ ಈಗ ಸುದ್ದಿಯಾಗಿದೆ.
ಅಮೆಜಾನ್‍ನಿಂದ ರೂ 4,000 ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದ ಗ್ರಾಹಕರೋರ್ವರಿಗೆ ರವಾನೆಯಾದುದು 10. ರೂ. ಮೌಲ್ಯದ ವಸ್ತು ಎಂದರೆ ನಂಬುವಿರಾ?.ಹೌದು ನಂಬಲೇ ಬೇಕು!. ವೇಲುಪದವು ಮೂಲದ ಬಿಜು ಈ ರೀತಿ ವಂಚನೆಗೊಳಗಾದವನು. ಈ ತಿಂಗಳ 1 ರಂದು, ಬಿಜು ತನ್ನ ಕಚೇರಿ ವಿಳಾಸದಲ್ಲಿ ಅಮೆಜಾನ್ ಮೂಲಕ ರೂ 4,000 ಮೌಲ್ಯದ ಡ್ರೋನ್ ನ್ನು ಬುಕ್ ಮಾಡಿದ್ದರು.
ಆದರೆ ಬಿಜು ಅವರಿಗೆ ಕಳಿಸಿದ್ದು ಎರಡು ಪ್ಯಾಕೇಟ್ ಬಿಸ್ಕತ್ತುಗಳನ್ನು!. ಬಿಜು ತನ್ನ ಕಛೇರಿಯ ವಿಳಾಸದಲ್ಲಿ ಪಾರ್ಸಲ್ ನ್ನು ತೆರೆದು ನೋಡಿದಾಗ ಡ್ರೋನ್‍ಗಳ ಬದಲು ಎರಡು ಬಿಸ್ಕೇಟ್ ಪ್ಯಾಕೆಟ್‍ಗಳು ಕಂಡುಬಂದಿತು. ನಂತರ ಬಿಜು ಅಮೆಜಾನ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೂರು ನೀಡಿದರು. ಅಮೆಜಾನ್‍ನಿಂದ ಗ್ರಾಹಕರು ಇತ್ತೀಚೆಗೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುವುದು ಬೆಳಕಿಗೆ ಬರುತ್ತಿವೆ.