ಕಾಸರಗೋಡು: ಕೃಷಿ ದಿನಾಚರಣೆ ಅಂಗವಾಗಿ ಮಂಗಳವಾರ ಕಾಸರಗೋಡು ಜಿಲ್ಲೆಯ 41 ಕೃಷಿಭವನಗಳಲ್ಲಿ ಕೃಷಿಸಾಧಕರಿಗೆ ಅಭಿನಂದನೆ ಜರುಗಿತು. ಕೃಷಿ ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡ ವಿಭಾಗದ ಸಾಧಕರಿಗೆ ಅಭಿನಂದನೆಗಳು ಈ ವೇಳೆ ಜರುಗಿದುವು.
ಕೃಷಿಕ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ 57 ಕೃಷಿ ಸಂತೆಗಳು ಆರಂಭಗೊಂಡಿವೆ. ಓಣಂ ಹಬ್ಬದ ಉತ್ರಾಡಂ ದಿನ ವರೆಗೆ ಓಣಂ ಸಂತೆಗಳು ಚಟುವಟಿಕೆ ನಡೆಸಲಿವೆ. ಕೃಷಿಭವನಗಳ ವ್ಯಾಪ್ತಿಯ ಕೃಷಿಕರಿಂದ ತರಕಾರಿಗಳನ್ನು ಉಳಿದೆಡೆಗಳಿಗಿಂತ ಶೇ 10 ಬೆಲೆ ಅಧಿಕ ನೀಡಿ ಖರೀದಿಸಿ, ಓಣಂ ಸಂತೆಗಳಲ್ಲಿ ಮಾರುಕಟ್ಟೆಗಿಂತ ಶೇ 30 ದರ ಕಡಿತದಲ್ಲಿ ಸಾರ್ವಜನಿಕರಿಗೆ ತರಕಾರಿಗಳನ್ನು ಮಾರಾಟ ನಡೆಸಲಾಗುತ್ತಿದೆ.
ಮಂಜೇಶ್ವರ ಬ್ಲೋಕ್ ನಲ್ಲಿ 7 ಓಣಂ ಸಂತೆಗಳು, ಕಾರಡ್ಕ ಬ್ಲೋಕ್ ನಲ್ಲಿ 8 ಓಣಂ ಸಂತೆಗಳು, ಕಾಸರಗೋಡು ಬ್ಲೋಕ್ ನಲ್ಲಿ 10 ಓಣಸಂತೆಗಳು, ಪರಪ್ಪ ಬ್ಲೋಕ್ ನಲ್ಲಿ 11 ಓಣಂ ಸಂತೆಗಳು, ಕಾಞಂಗಾಡು ಬ್ಲೋಕ್ ನಲ್ಲಿ 10 ಓಣಂ ಸಂತೆಗಳು, ನೀಲೇಶ್ವರ ಬ್ಲೋಕ್ ನಲ್ಲಿ 11 ಓಣಂ ಸಂತೆಗಳು ಚಟುವಟಿಕೆ ಆರಂಭಿಸಿವೆ.