ಹೈದ್ರಾಬಾದ್: ರೋಟಾವೈರಸ್ ಅತಿಸಾರ ಬೇಧಿಯನ್ನು ತಡೆಗಟ್ಟಲು ತಾನು ತಯಾರಿಸಿರುವ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5ಡಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಅರ್ಹತೆಯವನ್ನು ಪಡೆದಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಸೋಮವಾರ ಪ್ರಕಟಿಸಿದೆ.
ರೋಟಾವ್ಯಾಕ್ ನ ಹೊಸ ರೂಪಾಂತರವಾದ ರೋಟವ್ಯಾಕ್ 5 ಡಿ, ಒಂದು ಅನನ್ಯ ರೋಟಾವೈರಸ್ ಲಸಿಕೆ ಸೂತ್ರೀಕರಣವಾಗಿದ್ದು, ಇದನ್ನು ಬಫರ್ ಇಲ್ಲದೆ ನಿರ್ವಹಿಸಬಹುದು ಮತ್ತು ಅದರ ಕಡಿಮೆ ಡೋಸ್ ಪರಿಮಾಣ (0.5 ಎಂಎಲ್) ಸುಲಭ ಲಸಿಕೆ ಲಾಜಿಸ್ಟಿಕ್, ಕೋಲ್ಡ್ ಚೈನ್ ನಿರ್ವಹಣೆ ಮತ್ತು ಲಸಿಕೆ ನೀಡಿಕೆ ನಂತರ ಕಡಿಮೆ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಯಾಗುತ್ತದೆ ಎಂದು ಕಂಪನಿ ಹೇಳಿದೆ.
ಈ ಲಸಿಕೆಯನ್ನು ರೋಟಾವೈರಸ್ ಸೋಂಕು ತಡೆಯಲು ಬಳಸಲಾಗುತ್ತದೆ. ಇದು ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ಡಬ್ಲ್ಯುಎಚ್‌ಒ ಪೂರ್ವ ಅರ್ಹತೆಯಿಂದ ಯುನೆಸೆಪ್ ಮತ್ತು ಪ್ಯಾನ್ ಅಮೆರಿಕನ್ ಹೆಲ್ತ್ ಅರ್ಗನೈಷನ್ ನಂತಹ ಏಜೆನ್ಸಿಗಳಿಂದ ರೋಟಾವ್ಯಾಕ್ 5 ಡಿ ಖರೀದಿ ಸಾಧ್ಯವಾಗಲಿದ್ದು, ಈ ಜೀವ ರಕ್ಷಕ ಲಸಿಕೆ ತ್ವರಿತಗತಿಯಲ್ಲಿ ಜಾಗತಿಕವಾಗಿ ದೊರೆಯುವಂತಾಗಲಿದೆ ಎಂದು ಭಾರತ್ ಬಯೋಟೆಕ್ ಜಂಟಿ ಮ್ಯಾನೇಜಿಂಗ್ ಡೈರೆಕ್ಟರ್ ಸುಚಿತಾ ಎಲಾ ತಿಳಿಸಿದ್ದಾರೆ.
ರೋಟಾವ್ಯಾಕ್ ಮತ್ತು ರೋಟಾವ್ಯಾಕ್ 5 ಡಿಯನ್ನು ಭಾರತೀಯ ಮತ್ತು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಭಾರತದಲ್ಲಿ ಆವಿಷ್ಕರಿಸಲಾಗಿದೆ. ಇಂದಿನ ಘೋಷಣೆಯು ನಿರ್ಲಕ್ಷಿತ ರೋಗಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದಲ್ಲಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸೋಂಕುಗಳನ್ನು ತಡೆಗಟ್ಟಲು ಭಾರತ್ ಬಯೋಟೆಕ್‌ನ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಪೂರೈಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತ್ ಬಯೋಟೆಕ್ ಮೊದಲ ತಲೆಮಾರಿನ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ ನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರದ ಜೈವಿಕ ತಂತ್ರಜ್ಞಾನ ಇಲಾಖೆ, 16 ಇತರ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸಿದೆ, ಇದು ಸಾರ್ವಜನಿಕ ಆರೋಗ್ಯಕ್ಕಾಗಿ ಇದುವರೆಗಿನ ಅತಿದೊಡ್ಡ ಸಾಮಾಜಿಕ ನಾವೀನ್ಯತೆಯ ಯೋಜನೆಯಾಗಿದೆ.