HEALTH TIPS

ಮುಂಬೈನಲ್ಲಿ ಗಣೇಶೋತ್ಸವ ಉತ್ಸಾಹ: 519 ಮಂಡಲಗಳಿಗೆ ಮಾತ್ರ ಅನುಮತಿ

                ಮುಂಬೈ : ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ 2021ನೇ ವರ್ಷದಲ್ಲಿ ಗಣೇಶೋತ್ಸವ ಆಚರಿಸಲು 519 ಮಂಡಲಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಅನುಮತಿ ನೀಡಿದೆ.


              ಮುಂಬೈನ 1,273 ಮಂಡಲಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ 519 ಮಂಡಲಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗು ಆರಂಭಕ್ಕೂ ಮೊದಲು ಇದೇ ಮುಂಬೈನಲ್ಲಿ 3,000 ಮಂಡಲಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿತ್ತು. ಆದರೆ ಇದೀಗ ಚಿತ್ರಣ ಬದಲಾಗಿದೆ.

          2021ನೇ ವರ್ಷದಲ್ಲಿ ಸಪ್ಟೆಂಬರ್ 10ರಿಂದ ಆರಂಭವಾಗಲಿರುವ ಗಣೇಶೋತ್ಸವ ಹಬ್ಬ ಆಚರಿಸುವುದಕ್ಕೆ ಸಂಬಂಧಿಸಿದಂತೆ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ನಿಯಮ ಮತ್ತು ಶಿಷ್ಟಾಚಾರಗಳನ್ನು ಜಾರಿಗೊಳಿಸಿದೆ. ಅದ್ಧೂರಿ ಗಣೇಶೋತ್ಸವ ಆಚರಣೆಗೆ ಸಾಕ್ಷಿಯಾಗುತ್ತಿದ ಮುಂಬೈ ಮಹಾನಗರದ ರಸ್ತೆಗಳು ಬಿಕೋ ಎನ್ನುತ್ತಿವೆ.

                    ಮೊದಲಿದ್ದ ಹಬ್ಬದ ಆಚರಣೆ ಕಳೆ ಈಗಿಲ್ಲ. ಗಣೇಶ ಮೂರ್ತಿಗಳಿಗೆ ಮೊದಲಿನ ರೀತಿಯಲ್ಲಿ ಬೇಡಿಕೆಯೂ ಇಲ್ಲ ಎಂದು ಪಶ್ಚಿಮ ವಿಭಾಗದಲ್ಲಿ ಮೂರ್ತಿ ತಯಾಕರ ಸಂಸ್ಥೆಯನ್ನು ಹೊಂದಿರುವ ವಿನಯ್ ಜಿಲ್ಕಾ ಹೇಳಿದ್ದಾರೆ.


                        ದೊಡ್ಡ ಗಣೇಶ ಮೂರ್ತಿ ಖರೀದಿಸಲು ಹಿಂದೇಟು

          ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಗಣೇಶ ಚತುರ್ಥಿ ಆಚರಣೆ ನಂತರದ ಮೂರ್ತಿಗಳ ವಿಸರ್ಜನೆ ಬಗ್ಗೆ ಅಸ್ಪಷ್ಟತೆಯಿಂದ ಜನರು ದೊಡ್ಡ ಮೂರ್ತಿಗಳನ್ನು ಖರೀದಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೊವಿಡ್-19 ಇಲ್ಲದ ಸಂದರ್ಭದಲ್ಲಿ ನಮಗೆ ಕೆಲಸ ಮಾಡುವುದಕ್ಕೆ ಇರುವ ಸಮಯ ಸಾಕಾಗುತ್ತಿರಲಿಲ್ಲ, ಅಷ್ಟರ ಮಟ್ಟಿಗೆ ಬ್ಯುಸಿ ಆಗಿರುತ್ತಿದ್ದೆವು. ಗಣೇಶ ವಿಗ್ರಹ ತಯಾರಿಸುವ ಈ ಸ್ಥಳದಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದರೆ ಇದೀಗ ಜನರು ದೊಡ್ಡ ವಿಗ್ರಹಣಗಳನ್ನು ಖರೀದಿಸಲು ಹೆದರುತ್ತಿದ್ದಾರೆ. ಇದರಿಂದಾಗಿ ವಿಗ್ರಹಣಗಳಿಗೆ ಬೇಡಿಕೆಯೂ ಕಡಿಮೆಯಾಗಿದೆ ಎಂದು ಗಣೇಶ ಮೂರ್ತಿ ತಯಾಕರ ವಿನಯ್ ಜಿಲ್ಕಾ ತಿಳಿಸಿದ್ದಾರೆ.

                                  ಮುಂಬೈನಲ್ಲಿ ಮನೆ ಬಾಗಿಲಿಗೆ ಗಣೇಶ

          "ಕೊವಿಡ್-19 ಸಾಂಕ್ರಾಮಿಕ ಪಿಡುಗನ್ನು ಗಮನದಲ್ಲಿ ಇಟ್ಟುಕೊಂಡು ಪರಿಸರ ಸ್ನೇಹಿ ವಿಗ್ರಹಗಳ ಮೂಲಕ ಗಣೇಶ ಚತುರ್ಥಿ ಆಚರಿಸುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಎನ್‌ಜಿಒ ಮುಖ್ಯಸ್ಥ ಸತ್ಯಜಿತ್ ಬೋನ್ಸಲೆ ಹೇಳಿದ್ದಾರೆ. ನಮ್ಮ ತಂಡವು ಮನೆ ಮನೆಗೆ ಗಣೇಶ ವಿಗ್ರಹಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಸಾರ್ವಜನಿಕರು ಮನೆಯಿಂದ ಹೊರಬಾರದೇ ಮೂರ್ತಿಗಳನ್ನು ಪಡೆದುಕೊಳ್ಳುವುದಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುತ್ತದೆ," ಎಂದು ಹೇಳಿದ್ದಾರೆ.
"ಅರ್ಧ ಗಂಟೆಯಲ್ಲಿ ವಿಗ್ರಹಗಳನ್ನು ವಿಸರ್ಜಿಸುವ ಜನರಿಗೆ ನಾವು ಪರ್ಯಾಯ ಮಾರ್ಗವನ್ನು ನೀಡಿದ್ದೇವೆ. ನೀವು ಈ ವಿಗ್ರಹಗಳನ್ನು ನೈಸರ್ಗಿಕ ಮೂಲದಲ್ಲಿ ವಿಸರ್ಜಿಸಿದರೂ ಅದು ಪರಿಸರದ ಮೇಲೆ ಯಾವುದೇ ರೀತಿ ಕೆಟ್ಟ ಪರಿಣಾಮ ಬೀರುವುದಿಲ್ಲ. ನಾವು ನೈಸರ್ಗಿಕವಾಗಿ ಈ ವಿಗ್ರಹಣಗಳನ್ನು ತಯಾರಿಸಿದ್ದೇವೆ. ಸಾಮಾನ್ಯವಾಗಿ ಕೃತಕ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ನಾವು ನೈಸರ್ಗಿಕವಾಗ ಅರಿಶಿಣ ಮತ್ತು ಕುಂಕುಮವನ್ನು ಬಳಸುತ್ತೇವೆ. ಈ ವರ್ಷ ಇದರಿಂದ ಬರುವ ಆದಾಯವನ್ನು ನಾವು ಯಶೋಧನ್ ಎನ್‌ಜಿಒಗೆ ನೀಡುತ್ತೇವೆ. ಇದು ಮಹಾರಾಷ್ಟ್ರದಲ್ಲಿರುವ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಮಾನಸಿಕ ರೋಗಿಗಳ ಚಿಕಿತ್ಸೆಗೆ ಆ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ," ಎಂದು ಭೋನ್ಸಾಲೆ ಹೇಳಿದ್ದಾರೆ.

                           ಗಣೇಶೋತ್ಸವದ ಉತ್ಸಾಹಕ್ಕೆ ಅಡ್ಡಿಯಾಗದ ಶಿಷ್ಟಾಚಾರಗಳು

              ಮಹಾರಾಷ್ಟ್ರದಲ್ಲಿ ಲಾಲ್‌ಬಾಗ್ ಕಾ ರಾಜನಿಂದ ಹಿಡಿದು ಗಣೇಶ ಗಲ್ಲಿಯ ಜನಪ್ರಿಯ ಗಣಪತಿಯವರೆಗೆ ದೊಡ್ಡ ಮತ್ತು ಸಣ್ಣ ಮಂಡಲಗಳು 11 ದಿನಗಳ ಗಣೇಶೋತ್ಸವಕ್ಕಾಗಿ ಅಣಿಯಾಗಿವೆ. ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಕೊವಿಡ್-19 ಕಠಿಣ ಮಾರ್ಗಸೂಚಿಗಳ ನಡುವೆ ಹೊಸ ಉತ್ಸಾಹದೊಂದಿಗೆ ಹಬ್ಬ ಆಚರಿಸಲು ಸಕಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ವರ್ಷವೂ ಲಾಲ್‌ಬಾಗ್ ಗಣಪತಿ ಇರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದು, ನಾವು ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ. ಮಂಡಲದಲ್ಲಿ ಸ್ವಯಂಸೇವಕರ ಸಂಖ್ಯೆಯನ್ನು ಸೀಮಿತವಾಗಿರಿಸುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಶಿಷ್ಟಾಚಾರಗಳನ್ನು ಪಾಲನೆ ಮಾಡುವುದಾಗಿ ಲಾಲ್‌ಬಾಗ್ ಕಾ ರಾಜ ಗಣಪತಿ ಮಂಡಲದ ಅಧ್ಯಕ್ಷ ಬಾಳಾಸಾಹೇಬ್ ಕಾಂಬಳೆ ಹೇಳಿದ್ದಾರೆ.

                       ಮುಂಬೈ ಮಹಾನಗರ ಪಾಲಿಕೆ ಹೊರಡಿಸಿರುವ ಪ್ರಮುಖ ಶಿಷ್ಟಾಚಾರ

             ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಮುಂಬೈ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಹಬ್ಬ ಆಚರಣೆ ಸಂತಸದಲ್ಲಿ ಮೈ ಮರೆಯದಂತೆ ಮುನ್ನೆಚ್ಚರಿಕೆ ವಹಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಾಲಿಕೆ ಹೊರಡಿಸಿರುವ ಪ್ರಮುಖ ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಮಹಾರಾಷ್ಟ್ರ ಸರ್ಕಾರದ ಪ್ರಮುಖ ಕೊವಿಡ್-19 ಶಿಷ್ಟಾಚಾರ:
* ಸಾರ್ವಜನಿಕ ಪ್ರದೇಶದಲ್ಲಿ 4 ಅಡಿಗಿಂತ ದೊಡ್ಡ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ
* ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹ 2 ಅಡಿಗಿಂತ ಹೆಚ್ಚಾಗಿರುವಂತಿಲ್ಲ
* ಮಂಡಲಗಳಲ್ಲಿ ಜನರನ್ನು ಸೇರಿಸುವುದನ್ನು ನಿರ್ಬಂಧಿಸಿದ್ದು, ಆನ್ ಲೈನ್ ಮೂಲಕ ಭಕ್ತರಿಗೆ ದರ್ಶನದ ವ್ಯವಸ್ಥೆ
* ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮಂಡಲದಲ್ಲಿ ಒಂದು ಬಾರಿಗೆ 5ಕ್ಕಿಂತ ಹೆಚ್ಚು ಸ್ವಯಂ ಸೇವಕರು ಇರುವಂತಿಲ್ಲ

ಮಹಾರಾಷ್ಟ್ರದಲ್ಲಿ ಕೊವಿಡ್-19 ಶಿಷ್ಟಾಚಾರಕ್ಕೆ ವಿರೋಧ

         ಮಹಾರಾಷ್ಟ್ರದಲ್ಲಿ ಯಾವುದೇ ರೀತಿ ಜನಸಂದಣಿ ಇಲ್ಲದೇ ನಿಯಮಬದ್ಧವಾಗಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ. "ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಯ ಸಮಯದಲ್ಲಿ ನಡೆದ ಘಟನೆಗಳೇ ಮಹಾರಾಷ್ಟ್ರದಲ್ಲಿ ಗಣೇಶೋತ್ಸವಕ್ಕೆ ನಡೆಯುತ್ತಿದೆ. ಈ ಮಂಡಲಗಳಿಗೆ ಹೇಗೆ ಆಚರಿಸಬೇಕು, ಏನು ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಹೇಳಿದ್ದಾರೆ. ಮತ್ತೊಬ್ಬ ಬಿಜೆಪಿ ಶಾಸಕ ರಾಮ್ ಕದಮ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. "ನೋಡಿ, ನಾವು ಕೊವಿಡ್-19 ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಹಬ್ಬವನ್ನು ಆಚರಿಸಲೇಬಾರದು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ." ಎಂದಿದ್ದಾರೆ.
            "ಮಹಾರಾಷ್ಟ್ರ ಸರ್ಕಾರವು ಹಬ್ಬದ ಆಚರಣೆಗೆ ನಿಗದಿತ ಶಿಷ್ಟಾಚಾರ ಮತ್ತು ಎಸ್‌ಓಪಿಗಳನ್ನು ಹೊರಡಿಸಿದೆ. ಪ್ರತಿಯೊಬ್ಬ ನಾಗರಿಕರು ಮತ್ತು ನಾಯಕರು ಅವುಗಳನ್ನು ಅನುಸರಿಸಬೇಕು. ನರೇಂದ್ರ ಮೋದಿ ಅವರೇ ಹಬ್ಬಗಳಲ್ಲಿ ಜನದಟ್ಟಣೆ ಸೇರದಂತೆ ಹೇಳುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ತಮ್ಮ ನಾಯಕರಿಗೆ ಹೇಳಿದ್ದಾರೆ. ಬಿಜೆಪಿ ಶಾಸಕರೇ ಮೋದಿ ಮಾತನ್ನು ಕೇಳದಿದ್ದರೆ ನಾವು ಏನು ಹೇಳಬೇಕು?," ಎಂದು ರಾಜ್ಯ ಅಲ್ಪಸಂಖ್ಯಾತ ಖಾತೆ ಸಚಿವ ನವಾಬ್ ಮಲ್ಲಿಕ್ ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries