HEALTH TIPS

ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!

              ನವದೆಹಲಿ : ವಿರೋಧ ಪಕ್ಷಗಳ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಲಾಪಗಳು ಮತ್ತೆ ಮತ್ತೆ ಮುಂದೂಡಲ್ಪಡುತ್ತಾ ಸಾಗುತ್ತಿವೆ. ಹೀಗಿರುವಾಗ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 12 ಮಸೂದೆಗಳನ್ನು ಸರಾಸರಿ 7 ನಿಮಿಷಕ್ಕಿಂತ ಕಡಿಮೆ ಚರ್ಚೆಯೊಂದಿಗೆ ಅಂಗೀಕರಿಸಿದೆ ಎಂದು ಟಿಎಂಸಿ ಸಂಸದ ಡೆರೆಕ್​ ಒ ಬ್ರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


             ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಬಂಗಾಳದ ಸಂಸದ ಡೆರೆಕ್​ ಅವರು, 'ಕಳೆದ 10 ದಿನಗಳಲ್ಲಿ ಮೋದಿ-ಷಾ 12 ಮಸೂದೆಗಳನ್ನು 7 ನಿಮಿಷಕ್ಕಿಂತ ಕಡಿಮೆ ಚರ್ಚೆ ನಡೆಸಿ, ತರಾತುರಿಯಲ್ಲಿ ಪಾಸ್​ ಮಾಡಿಸಿದ್ದಾರೆ' ಎಂದಿದ್ದಾರೆ. 'ಕಾನೂನು ಮಾಡುತ್ತಿದ್ದಾರಾ? ಇಲ್ಲಾ ಪಾಪ್ಡಿ ಚ್ಯಾಟ್​ ಮಾಡುತ್ತಿದ್ದಾರಾ?' ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

             ತಮ್ಮ ಈ ಟ್ವೀಟ್​ನಲ್ಲಿ ವಿವಿಧ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ನಡೆದ ಚರ್ಚೆಯ ಅವಧಿಗಳ ವಿವರವನ್ನು ಡೆರೆಕ್​ ಅಡಕಗೊಳಿಸಿದ್ದಾರೆ. ಇದರಲ್ಲಿ ಕೊಕೊನಟ್​ ಡೆವಲೆಪ್​ಮೆಂಟ್​ ಬೋರ್ಡ್​ ಬಿಲ್​​ಅನ್ನು ಒಂದು ನಿಮಿಷ ಚರ್ಚೆ ಮಾಡಿದ ನಂತರ ಅಂಗೀಕರಿಸಲಾಯಿತು ಎಂದು ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries