HEALTH TIPS

'ನಮ್ಮ ನಡಿಗೆ 75 ಹಿರಿಯರ ಮನೆಗೆ' ಕಾರ್ಯಕ್ರಮಕ್ಕೆ ಚಾಲನೆ

          ಕಾಸರಗೋಡು: ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸಂಭ್ರಮದ ಅಮೃತ ಮಹೋತ್ಸವವನ್ನು 75 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ  ತಮ್ಮ ಸ್ವಗೃಹದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ನಮನ-ನಮ್ಮ ನಡಿಗೆ 75 ಹಿರಿಯರ ಮನೆಗೆ'ಎಂಬ ಧ್ಯೇಯದೊಂದಿಗೆ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ವಿನೂತನವಾದ ಕಾರ್ಯಕ್ರಮವೊಂದನ್ನು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಮತ್ತು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದೆ.

              ಹಿರಿಯ ಸಹಕಾರಿ, ಸಮಾಜ ಸೇವಕ ಗಣಪತಿ ಕೋಟೆಕಣಿ ಅವರನ್ನು ಅವರ ಮನೆಯಲ್ಲಿ ಶಾಲು ಹೊದಿಸಿ, ಹಣ್ಣು ಹಂಪಲು ಮತ್ತು 75 ರೂ. ನಾಣ್ಯದ ಚೀಲ ನೀಡಿ ಖ್ಯಾತ ಉದ್ಯಮಿ ರಾಂ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 1947 ರಲ್ಲಿ ಜನಿಸಿದ 75 ಮಂದಿಯನ್ನು ಸಮ್ಮಾನಿಸಿ ಗೌರವಿಸಲಾಗುವುದು. ಆ ಬಳಿಕ ಸ್ವಾತಂತ್ರ್ಯೋತ್ಸವ ನಮನವನ್ನು ಸ್ವೀಕರಿಸಿರುವ 75 ಹಿರಿಯ ನಾಗರಿಕರ ಹೆಸರು, ವಿಳಾಸ, ಸಹಿಯೊಂದಿಗೆ, ಮಹತ್ವದ ದಾಖಲೆ ಪತ್ರವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕಳುಹಿಸಿ ಕೊಡಲಾಗುವುದು. 

                 ಹರಿದಾಸ ಜಯಾನಂದ ಕುಮಾರ್, ಕಾಸರಗೋಡು ನಗರಸಭಾ ಸದಸ್ಯ ವರ ಪ್ರಸಾದ್ ಕೋಟೆಕಣಿ ಮಾತನಾಡಿದರು. ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ಚಂದ್ರ ಸೂರ್ಲು ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries