ಮಂಜೇಶ್ವರ: ಮೀಯಪದವಿನ ಮಾಸ್ಟರ್ಸ್ ಆಟ್ರ್ಸ್ -ಸ್ಪೋಟ್ರ್ಸ್ ಕ್ಲಬ್‍ನಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮೀಯಪದವಿನ ಹಿರಿಯ ವ್ಯಾಪಾರಿ ದಿನಕರ ಭಟ್ ಧ್ವಜಾರೋಹಣಗೈದು ಶುಭ ಹಾರೈಸಿದರು. ಕೃಷ್ಣಪ್ರಸಾದ್ ಮದಂಗಲ್ಲು ಹಾಗೂ ಕ್ಲಬ್ ನ ಗೌರವ ಸದಸ್ಯ ಪುಷ್ಪರಾಜ ಶೆಟ್ಟಿ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಗೌರವ ಸಲಹೆಗಾರರಾದ ಜನಾರ್ದನ ಎಸ್, ಕಾರ್ಯದರ್ಶಿ ನಿಶಾನ್ ರೈ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಕಿರಣ್ ಭಟ್ ಸ್ವಾಗತಿಸಿ, ಅಧ್ಯಕ್ಷ ರಘುವೀರ್ ರಾವ್ ವಂದಿಸಿದರು.