ಮಧುರೈ: ಮಧುರೈ ಆಧೀನಂನ 77 ವರ್ಷದ ಧರ್ಮಗುರು ಅರುಣಗಿರಿನಾಥ ಜ್ಞಾನಸಂಬಂತ ದೇಶಿಕ ಪರಮಾಚಾರ್ಯ ಸ್ವಾಮಿಗಳು ಶುಕ್ರವಾರ ರಾತ್ರಿ 9.15ಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಆಗಸ್ಟ್ 8ರಂದು ಉಸಿರಾಟದ ತೊಂದರೆಯಿಂದಾಗಿ ಅರುಣಗಿರಿನಾಥ್ ಸ್ವಾಮೀಜಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಧುರೈ ಅಧೀನಂ, ರಾಜ್ಯದ ಅತ್ಯಂತ ಹಳೆಯ ಶೈವದ ಅಧೀನಂಗಳಲ್ಲಿ ಒಂದೆಂದು(ಹಿಂದೂ ಮಠ) ಪರಿಗಣಿಸಲಾಗಿದೆ. ಇದನ್ನು ಸಹಸ್ರಮಾನಗಳಿಗಿಂತಲೂ ಹಿಂದೆ ಸ್ಥಾಪಿಸಲಾಯಿತು. ನಾಯನ್ಮಾರ್‌ಗಳಲ್ಲಿ ಒಬ್ಬರಾದ(ಶಿವನ ಶಿಷ್ಯರಾದ) ತಿರುಜ್ಞಾನ ಸಂಬಂಧರಿಂದ ಪುನಶ್ಚೇತನಗೊಂಡಿತ್ತು ಎಂದು ಹೇಳಲಾಗುತ್ತದೆ.