ನವದೆಹಲಿ: ದೇಶದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೇರಿಯೆಂಟ್ ಹೊಂದಿರುವ 86 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ 45 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಭಾರತದಲ್ಲಿ ಸಾಂಕ್ರಾಮಿಕ ಸ್ಥಿತಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ರೋಗ ನಿಯಂತ್ರಕ ಕೇಂದ್ರದ ನಿರ್ದೇಶಕ ಎಸ್‌ಕೆ ಸಿಂಗ್ ಅವರು, ಸಾಂಕ್ರಾಮಿಕ ರೋಗ ವಿಶ್ಲೇಷಣೆಯ ಮಧ್ಯಂತರ ಸಂಶೋಧನೆಗಳು ಡೆಲ್ಟಾ ರೂಪಾಂತರವನ್ನು ಮೀರಿ ಸಾರ್ವಜನಿಕ ಆರೋಗ್ಯ ಮಹತ್ವವನ್ನು ಹೊಂದಿರುವುದಿಲ್ಲ ಎಂದು ತೋರಿಸುತ್ತಿವೆ.
"ಇದುವರೆಗೆ ನಮ್ಮಲ್ಲಿರುವ ಸಾಕ್ಷ್ಯಗಳಿಂದ, ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ಭಾರತದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯನ್ನು ಉತ್ತೇಜಿಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ.
ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ನ ಮುಖ್ಯಸ್ಥರಾಗಿರುವ ಆರೋಗ್ಯ, ನೀತಿ ಆಯೋಗದ ಸದಸ್ಯರಾದ ವಿ.ಕೆ. ಪಾಲ್ ಅವರು ಸಹ ಇದೇ ರೀತಿಯ ಸಂದೇಶವನ್ನು ನೀಡಿದ್ದು, ಈ ರೂಪಾಂತರದ ಭೌಗೋಳಿಕ ಹರಡುವಿಕೆಯನ್ನು ಗಮನಿಸಿದರೆ ಡೆಲ್ಟಾ ಪ್ಲಸ್ ಕೊರೋನಾ ಹೆಚ್ಚಾಗಲು ಕಾರಣವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಈಗ ಭಾರತದ ಹೆಚ್ಚಿನ ರಾಜ್ಯಗಳಲ್ಲಿ, ಡೆಲ್ಟಾ ಪ್ಲಸ್ ಶೇ. 80-90 ರಷ್ಟು ಸೋಂಕಿತರಿಂದ ಸಂಗ್ರಹಿಸಿದ ಸುಮಾರು 59,000 ಮಾದರಿಗಳಲ್ಲಿ ಪತ್ತೆಯಾಗಿದೆ. ಇವುಗಳನ್ನು ಕೇಂದ್ರದ INSACOG ಯೋಜನೆಯಡಿ ಸಂಪೂರ್ಣ ಜೀನೋಮ್ ಅನುಕ್ರಮಕ್ಕೆ ಒಳಪಡಿಸಲಾಗಿದೆ ಎಂದು ವಿ.ಕೆ. ಪಾಲ್ ಅವರು ಹೇಳಿದ್ದಾರೆ.