ತುಳುನಾಡ ಕರಾವಳಿ ಜಿಲ್ಲೆಯಲ್ಲಿ ಕೊರೋನಾ ನಾಗಲೋಟದಲ್ಲಿ ಮುನ್ನುಗ್ಗುತ್ತಿದೆ. ಕೊರೋನಾ ಮಹಾಮಾರಿಯಿಂದ ಈಗಾಗಲೇ ಹಲವು ಸಂಕಷ್ಟಗಳು ಎದುರಾಗಿದೆ. ತುಳುನಾಡಿನ ಜಾನಪದ ಆಚರಣೆಗಳಲ್ಲಿ ಒಂದಾದ ಆಟಿಕಳೆಂಜವೂ ಕೊರೋನಾದಿಂದ ಹೊರಗುಳಿಯುವಂತಾಗಿದೆ.
ತುಳುನಾಡಿನ ಜಾನಪದೀಯ ಆಚರಣೆಗಳಲ್ಲಿ ಒಂದಾದ ಆಟಿ ಕಳೆಂಜಗೆ ಮಹತ್ವದ ಹಿನ್ನೆಲೆಯಿದೆ. ಆಷಾಢ ತಿಂಗಳಿನಲ್ಲಿ ಮನೆ ಮನೆಗೆ ತೆರಳುವ ಆಟಿ ಕಳೆಂಜ ಊರಿನ ರೋಗ ರುಜಿನವನ್ನು ದೂರಮಾಡುವ ಸಾಮಾರ್ಥ್ಯ ಹೊಂದಿದ್ದಾನೆAಬ ನಂಬಿಕೆ ಜನರಲ್ಲಿ ಇದೆ.
ಕರಾವಳಿಯಲ್ಲಿ ಆಷಾಢ ತಿಂಗಳ ವ್ಯಾಧಿ ಸಂಕಷ್ಟಗಳನ್ನು ನಿವಾರಿಸುವ ಆಟಿ ಕಳಂಜ ನಾಡಿಗಿಳಿಯುವ ಕಾಲ ಇದು. ಆದರೆ ಈ ಬಾರಿ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಕಳಂಜನೂ ಹೊರಗಿಳಿಯದಂತಾಗಿದೆ. ಮನೆಮನೆಗಳಿಗೆ ತೆರಳಿ ದುರಿತ ನಿವಾರಿಸುವ ಪುಟ್ಟ ದೈವಗಳೆಂದೇ ಪ್ರತೀತಿಯಾಗಿರುವ ಆಟಿ ಕಳಂಜಕ್ಕೂ ಕೊರೋನಾದಿಂದ ಸಂಕಷ್ಟ ಎದುರಾಗಿದೆ.
ತುಳುನಾಡಿನಾದ್ಯಾಂತ ಆಟಿ ಕಳಂಜ ವಿವಿಧ ಹೆಸರು, ರೂಪಗಳಲ್ಲಿ ಸಾಮಾಜಿಕ ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಜಾನಪದ ಆಚರಣೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಹಿತ ಕೇರಳದ ಮಲಬಾರ್ ಪ್ರದೇಶಗಳಲ್ಲಿ ಈ ಕಲಾಪ್ರಕಾರ ಸಮಗ್ರವಾಗಿ ಬೆಳೆದುಬಂದಿದೆ. ಆಷಾಢ ಸಂದರ್ಭದಲ್ಲಿ ಊರಿಗೆ ಬಂದೆರಗುವ ಮಹಾಮಾರಿಯನ್ನು ಓಡಿಸುವುದಕ್ಕೆ ಈ ಧಾರ್ಮಿಕ ಆಚರಣೆಯನ್ನು ಹಿಂದಿನಿAದಲೂ ನಡೆಸಿಕೊಂಡು ಬರಲಾಗುತ್ತದೆ.
ಕಳೆದ ವರ್ಷ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಟಿ ಕಳಂಜನ ಅವತರಣಿಕೆಗೆ ಸಾಧ್ಯವಾಗಿರಲಿಲ್ಲ. ಆದರೆ ಮಹಾಮಾರಿಯ ಕಾಲಘಟ್ಟದಲ್ಲಿ ಆ ಮಾರಿಯನ್ನು ಹೊರತಳ್ಳಲು ಕಳಂಜ ಈ ಬಾರಿಯಾದರೂ ಬಾರನೇ ಎಂಬ ಕೌತುಕದ ಮಧ್ಯೆ ಅಲ್ಲಲ್ಲಿ ಕಳಂಜ ಮನೆಮನೆ ಭೇಟಿ ನೀಡುತ್ತಿದ್ದಾನೆ. ಈ ನಿಟ್ಟಿನಲ್ಲಿ ನೀರ್ಚಾಲು ಸಮೀಪ ವ್ಯಾಪ್ತಿಯಲ್ಲಿ ಸಂಚಾರ ನಡೆಸಿದ ಕಳಂಜ ತಂಡವೊAದರ ಪುಟ್ಟ ಪರಿಚಯ ಇಲ್ಲಿದೆ.
ಸಮರಸ-ವಿಶೇಷ, ಆತಂಕದ ಕರಿನೆರಳಲ್ಲಿ ಸಂಕಷ್ಟ ನಿವಾರಿಸುವನೇ ಕಳಂಜ
0
ಆಗಸ್ಟ್ 01, 2021
Tags