ಕಾಸರಗೋಡಿನ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ ಮಹನೀಯರು ಅದೆಷ್ಟೋ ಆಗಿಹೋಗಿದ್ದಾರೆ. ಬದಲಾದ ಹೊಸ ವ್ಯವಸ್ಥೆಯ ಸಮಾಜದಲ್ಲಿ ಕಾಸರಗೋಡಿನ ಅಂತಹ ಸಾಧನಾಶೀಲರ ಕೊಡುಗೆಗಳು ಈಗಲೂ ಮುಂದುವರಿಯುತ್ತಿರುವುದು ಈ ಮಣ್ಣಿನ ವಿಶೇಷ.
ಪ್ರಸ್ತುತ ಯಕ್ಷಗಾನ ಭಾಗವತರಾಗಿ ಖ್ಯಾತರಾಗಿರುವವರು ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರು. ಪೆರ್ಲ.ಸ.ನಾ. ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಸತೀಶ ಪುಣಿಚಿತ್ತಾಯರು ಕಳೆದ ವರ್ಷ ತಮ್ಮ ಯಕ್ಷಗಾನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಕೊಲ್ಲಂಗಾನ ಮೇಳದಲ್ಲಿ ಭಾಗವತರಾಗಿದ್ದ ಅವರು ಇತ್ತೀಚೆಗೆ ಮಾಣಿಲ ಮೇಳವನ್ನು ಪ್ರಾರಂಭಿಸಿ ತೆಂಕಿನ ಹೊಸ ಮೇಳವೊಂದರ ಉದಯಕ್ಕೆ ಕಾರಣರಾದವರು.
ಮಿತಭಾಷೆ, ಸ್ನೇಹ ಸ್ವಭಾವದ ಪುಣಿಚಿತ್ತಾಯರು ಸಾಗಿಬಂದಿರುವ ಹಾದಿ ರೋಚಕ ಮತ್ತು ಕುತೂಹಲಕಾರಿ. ಸಜ್ಜನ ವ್ಯಕ್ತಿಯಾದ ಡಾ.ಪುಣಿಚಿತ್ತಾಯರೊಂದಿಗೆ ಸಮರ ಸುದ್ದಿ ಆಯೋಜಿಸಿದ ಸಮರಸ ಸಂವಾದದ ಅಗವತರಣಿಕೆ ಇಲ್ಲಿ ವೀಕ್ಷಕರಿಗಾಗಿ. ವೀಕ್ಷಿಸಿ....ಪ್ರೋತ್ಸಾಹಿಸಿ.
ಸಮರಸ - ಸಂವಾದ: ಸದಾ ಹೊಸತನದ ಹುಡುಕಾಟದ ಸಂಶೋಧಕ ಭಾಗವತ: ಅತಿಥಿ:ಡಾ.ಸತೀಶ ಪುಣಿಚಿತ್ತಾಯ ಪೆರ್ಲ
0
ಆಗಸ್ಟ್ 02, 2021
Tags