ಭಾಷೆ, ಸಂಸ್ಕ್ರತಿ ಮೊದಲಾದ ಆಂತರಂಗಿಕ ಸಂವೇದನೆಗಳ ಬಗೆಗಿನ ಚಟುವಟಿಕೆ ಎಂಬುದು ಹೊಸ ಕಾಲಘಟ್ಟದ ಯುವ ಜನತೆಗೆ ಎಂದಿಗೂ ಸೋಜಿಗವೆ. ಕಾರಣ ಇಂದಿನ ಕಾಲಮಾನ ಎಂಬುದು ಪೂರ್ಣ ಪ್ರಮಾಣದಲ್ಲಿ ವ್ಯಾವಹಾರಿಕತೆಯತ್ತ ಮುಖಮಾಡಿ ಲಾಭ ನಷ್ಟಗಳ ಲೆಕ್ಕಾಚಾರದಲ್ಲೇ ನಡೆಯುವಂತದ್ದು.
ಆದರೆ ಈ ಮಧ್ಯೆ ಕೆಲವು ವ್ಯಕ್ತಿಗಳು ಸ್ವಾ ಆಸಕ್ತರಾಗಿ ವ್ಯೆವಿಧ್ಯಮಯ ಜಗತ್ತಿಗೆ ಹಪಹಪಿಸುತ್ತಿರುತ್ತಾರೆ. ಇಂತವರಲ್ಲಿ ನಿವೃತ್ತ ಶಿಕ್ಷಕ ವೀರೇಶ್ವರ ಕರ್ಮರ್ಕರ್ ಕೂಡಾ ಒಬ್ಬರು. ಕಾಸರಗೋಡು ಗಡಿನಾಡಿನ ಕನ್ನಡ ಭಾಷೆ, ಸಂಸ್ಕ್ರತಿ, ಸಾಹಿತ್ಯ ಕಾವ್ಯಗಳಲ್ಲಿ ಆಸಕ್ತರಾಗಿ ನಿರ್ಭಿಡೆಯಿಂದ ತಮ್ಮದೇ ಶ್ಯೆಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಹೊರನೋಟಕ್ಕೆ ಅರ್ಥಹೀನ ತತ್ವಾದರ್ಶಗಳನ್ನು ಹೊತ್ತವರಂತೆ ಕಂಡರೂ, ಆಂತರಂಗಿಕವಾಗಿ ಸಮಾಜದ ಜಿಡ್ಡುಗಟ್ಟಿದ ಒಟ್ಟು ವ್ಯವಸ್ಥೆಯ ಪ್ರತಿಧ್ವನಿತ್ವದ ಎಳಸುತನ ಅವರಲ್ಲಿದೆ. ಸದಾ ವಿಕ್ಷಿಪ್ತ ಮನೋಭಾವದವರಾಗಿ ಕಂಡುಬರುವ ಅವರೊಳಗೆ ಸಮಾಜದ ಕರಾಳತೆಯ ಆಕ್ರಮಣಶೀಲ ವ್ಯವಸ್ಥೆಯೊಂದರ ತಾಳಲಾರದ ನೋವುನ ಹಪಹಪಿಕೆ ಅವರಲ್ಲಿದೆ.
ಇಂದು ಸಮರಸ ಸುದ್ದಿ ವೀಕ್ಷಕರಿಗಾಗಿ ಅವರೊಂದಿಗೆ ನಡೆಸಿದ ಸುಧೀರ್ಘ ಸಂವಾದದ ಆಯ್ದ ಭಾಗದ ಅವತರಣಿಕೆ ಇಲ್ಲಿದೆ.ವೀಕ್ಷಿಸಿ, ಪ್ರೋತ್ಸಾಹಿಸಿ....
ಸಮರಸ-ಸಂವಾದ: ಹೋರಾಟದ ಪ್ರವಾಹ ಗಂಗೇನೀರು: ಅತಿಥಿ: ವೀರೇಶ್ವರ ಕರ್ಮರ್ಕರ್
0
ಆಗಸ್ಟ್ 08, 2021
Tags