ತಿರುವನಂತಪುರಂ: ರಾಜ್ಯದಲ್ಲಿ ಮಲ್ಟಿ ಇನ್ಲಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ನಿಂದ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೋವಿಡ್ ಸೋಂಕು ಆರಂಭವಾಗಿ ಎರಡು ವರ್ಷಗಳಾಗಿವೆ. ಆರೋಗ್ಯ ಇಲಾಖೆಯ ಪ್ರಕಾರ, ಕಳೆದ ಒಂದೂವರೆ ವರ್ಷದಲ್ಲಿ 300 ಕ್ಕೂ ಹೆಚ್ಚು ಮಕ್ಕಳಿಗೆ ಎಂಐಎಸ್ ಸಿ ಬಾಧಿಸಿದ್ದು, ಇವರಲ್ಲಿ 95 ರಷ್ಟು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಮೃತರಾದ ನಾಲ್ವರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಪೈಕಿ ಒಬ್ಬರಿಗೆ ಮಾತ್ರ ಗಂಭೀರ ಅನಾರೋಗ್ಯ ಕಂಡುಬಮದಿತ್ತು. ಮಿಸ್ಕ್ ಸಾವಿನ ಕುರಿತು ತಿರುವನಂತಪುರಂ ಮತ್ತು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ವರದಿಯಾಗಿದೆ.
ಮಕ್ಕಳಿಗೆ ಲಸಿಕಾ ವ್ಯವಸ್ಥೆ ಇನ್ನೂ ಆರಂಭಗೊಂಡಿಲ್ಲ. ಈ ಮಧ್ಯೆ ಮೂರನೇ ಅಲೆ ಉಂಟಾದರೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದ್ದು, ಅದರ ಜೊತೆಗೆ ಈಗ ಎಂಐಎಸ್ ಸಿ ಕೂಡಾ ಕಂಡುಬಂದಿರುವುದು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಂದರ್ಭದಲ್ಲಿ, ಮಕ್ಕಳು ಕೋವಿಡ್ ಗಎ ಒಳಗಾಗದಂತೆ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕೋವಿಡ್ ಪಾಸಿಟಿವ್ ಇರುವ ಮಕ್ಕಳಲ್ಲಿ 3-4 ವಾರಗಳಲ್ಲಿ ಮಿಸ್ಕ್ ಅಥವಾ ಎಂಐಎಸ್ ಸಿ ಬಾಧಿಸುತ್ತದೆ.
ಹೆಚ್ಚಿನ ಜ್ವರ. ಚರ್ಮದ ಮೇಲೆ ಕೆಂಪು ಕಲೆಗಳು ಮತ್ತು ಕೀವು ತುಂಬಿದ ಕೆಂಪು ಕಣ್ಣುಗಳು ಇದರ ಲಕ್ಷಣಗಳಾಗಿವೆ.ಬಾಯಿಯ ಊತ, ಕಡಿಮೆ ರಕ್ತದೊತ್ತಡ, ಹೃದಯದ ತೊಂದರೆಗಳು, ಹೊಟ್ಟೆ ನೋವು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಕೂಡಾ ಇದರ ಪ್ರಮುಖ ಲಕ್ಷಣಗಳೆಂದು ಆರೋಗ್ಯ ಇಲಾಖೆ ತಿಳಿಸಿದೆ.