ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಕೇರಳಾದ್ಯಂತ ಜಾರಿಯಲ್ಲಿದ್ದ ವಾರಾಂತ್ಯ ಲಾಕ್‍ಡೌನ್ ಆಗಸ್ಟ್ 15 ಹಾಗೂ 22ರಂದು ಕೈಬಿಡಲಾಗಿದೆ. ಕೇರಳಾದ್ಯಂತ ಎಲ್ಲ ವ್ಯಾಪಾರಿ ಸಂಸ್ಥೆಗಳಿಗೂ ತೆರೆದು ಕಾಯಾಚರಿಸಲು ಅನುಮತಿ ನೀಡಲಾಗಿದೆ.
ಪ್ರತಿ ವಾರ ರೋಗ ಬಾಧಿತರ ಸಂಖೆ(ಐಪಿಆರ್) ಆಧಾರದಲ್ಲಿ ರಾಜ್ಯದ 87ಸ್ಥಳೀಯಾಡಳಿತ ಸಂಸ್ಥೆಗಳ 634 ವಾರ್ಡುಗಳಲ್ಲಿ ಏರ್ಪಡಿಸಲಾಗಿರುವ ಟ್ರಿಪಲ್ ಲಾಕ್‍ಡೌನ್ ಆ. 18ರ ವರೆಗೆ ಮುಂದುವರಿಯಲಿದೆ. ಐಪಿಆರ್ ಶೇ.8ಕ್ಕಿಂತ ಮೇಲಿದ್ದಲ್ಲಿ ನಿಯಂತ್ರಣ ಹೇರಲೂ ಆರೋಗ್ಯ ಇಲಾಖೆ ತೀರ್ಮಾನಿಸಿದೆ.