HEALTH TIPS

ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಗುವುದು; ಮುಂದಿನ ಗುರಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್; ಚಿಂತಾ ಜೆರೋಮ್

          

             ಕೊಚ್ಚಿ: ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ಪಿಎಚ್‍ಡಿ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಯೋಜಿಸಿದ್ದಾರೆ. ಇದಕ್ಕಾಗಿ ಪ್ರಯತ್ನಗಳು ಆರಂಭವಾಗಿವೆ ಎಂದು ಚಿಂತಾ ಜೆರೋಮ್  ಸ್ಪಷ್ಟಪಡಿಸಿದರು.  'ನವ ಉದಾರವಾದಿ ಅವಧಿಯಲ್ಲಿ ಮಲಯಾಳಂ ವಾಣಿಜ್ಯ ಸಿನಿಮಾದ ಐಡಿಯಾಲಜಿ' ಯಲ್ಲಿ ಅವರು ಡಾಕ್ಟರೇಟ್ ಪಡೆದಿರುವರು.

            ಮುಂದಿನ ಗುರಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಆಗಿದೆ ಎಂದವರು ಹೇಳಿರುವರು. ಕಾಲೇಜು ಶಿಕ್ಷಕಿಯಾಗÀಬೇಕೆಂಬುದು ತನ್ನ ಕನಸು. ಜೆ ಆರ್ ಎಫ್ ಗೆ ಅರ್ಹತೆ ಪಡೆದ ಬಳಿಕ, ಅವರು ಕೆಲವು ಕಾಲೇಜುಗಳಲ್ಲಿ ಶಿಕ್ಷಕರ ಸಂದರ್ಶನಗಳಿಗೆ ಹಾಜರಾದರು. ಕೆಲ ಸಮಯದಿಂದ ಅವರು ವಿದ್ಯಾರ್ಥಿಗಳಿಗೆ ಕೇರಳ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದಲ್ಲಿ ಸಂಪರ್ಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ತರಗತಿಗಳಲ್ಲಿ ಓದಿದ ವಿದ್ಯಾರ್ಥಿಗಳು ಅವರನ್ನು ಶಿಕ್ಷಕಿ ಎಂದು ಕರೆಯುವಾಗ ಬಹಳ ಸಂತೋಷವನ್ನು ಅನುಭವಿಸುತ್ತೇನೆ ಎಂದು ಹೇಳಿರುವರು.  ಅಧ್ಯಯನ, ಕೆಲಸ ಹಾಗೂ ಸಾರ್ವಜನಿಕ ಕೆಲಸಗಳು ಮುಂದೆ ಸಾಗುತ್ತವೆ ಎಂದು ಚಿಂತಾ ಜೆರೋಮ್ ಹೇಳಿದರು.

               ಡಾಕ್ಟರೇಟ್ ಪಡೆದ ಬಳಿಕ ಜೆಆರ್‍ಎಫ್ ಪ್ರಯೋಜನಗಳ ಕುರಿತ ಆರೋಪಗಳು ಆಧಾರರಹಿತವಾಗಿವೆ. ಆರೋಪಗಳು ಸುಳ್ಳುಗಳಾದ  ಕಾರಣ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಲಾಯಿತು. ತನ್ನನ್ನು ಕರೆದು ವಿಚಾರಿಸಿದವರಿಗೆ ಸತ್ಯವನ್ನು ವಿವರಿಸಿರುವೆನು. ತನ್ನ ಪಿಎಚ್‍ಡಿ, ಅರೆಕಾಲಿಕ ಶಿಕ್ಷಕಿ ಸಹಿತ ವಿವಿಧ ದಾಖಲೆಗಳನ್ನು ಅವರಿಗೆ ಕಳುಹಿಸಿರುವುದಾಗಿ  ಚಿಂತಾ ಜೆರೋಮ್ ಸ್ಪಷ್ಟಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries