ನವದೆಹಲಿ: ಕಾಂಗ್ರೆಸ್ ಮಾಜಿ ಸಂಸದೆ ಸುಷ್ಮಿತಾ ದೇವ್ ಅವರು ಪಕ್ಷವನ್ನು ತೊರೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಈ ನಡುವೆ ಸುಷ್ಮಿತಾ ದೇವ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರೊಫೈಲ್ ಬದಲಿಸಿದ್ದು, ಕಾಂಗ್ರೆಸ್'ನ ಮಾಜಿ ಸದಸ್ಯೆ ಎಂದು ಹಾಕಿಕೊಂಡಿದ್ದಾರೆ.
ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದ ಸುಷ್ಮಿತಾ ದೇವ್ ಅವರು, ಕಾಂಗ್ರೆಸ್ ಪಕ್ಷ ತೊರೆದಿರುವುದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಸುಷ್ಮಿತಾ ಅವರು, ಸಾರ್ವಜನಿಕ ಸೇವೆಯಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿರುವುದಾಗಿ ಹೇಳಿದ್ದರು.
48 ವರ್ಷದ ಸುಷ್ಮಿತಾ ದೇವ್ ಈ ಹಿಂದೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು. ಸುಷ್ಮಿತಾ ದೇವ್ ಅವರ ತಂದೆ ಸಂತೋಷ್ ಮೋಹನ್ ದೇವ್ ಈ ಹಿಂದೆ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮತ್ತು ತಾಯಿ ಬಿತಿಕಾ ದೇವ್ ಅವರು ಅಸ್ಸಾಂನಲ್ಲಿ ಶಾಸಕಿಯಾಗಿದ್ದರು.