ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೋವಿಡ್-19 ಮುಂಚೂಣಿ ಹೋರಾಟಗಾರರು ಮತ್ತು ವಿದ್ಯಾರ್ಥಿಗಳಿಗೆ ಆ.10ರಂದು ವಾಕ್ಸಿನೇಷನ್ ಒದಗಿಸುವುದಾಗಿ ಮತ್ತು ಇದಕ್ಕಾಗಿ 2 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಮುಂಚೂಣಿ ಹೋರಾಟಗಾರರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಆನಂದಾಶ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಯ ಐ.ಎಂ.ಎ. ಸಭಾಂಗಣದಲ್ಲಿ ಸಜ್ಜೀಕರಣ ನಡೆದಿದೆ. ಇ-ಹೆಲ್ತ್ ಪೆÇೀರ್ಟಲ್ ಮೂಲಕ ಸಂದೇಶ ಲಭಿಸಿರುವ ಮಂದಿ ಸಂದೇಶದ ಪ್ರಿಂಟ್ ಔಟ್, ಗುರುತುಚೀಟಿ ಇತ್ಯಾದಿ ಸಹಿತ ಅಂದು ಬೆಳಗ್ಗೆ 9 ಗಂಟೆಯಿಮದ ಮಧ್ಯಾಹ್ನ 1 ಗಂಟೆಗೆಯ ನಡುವಿನವಧಿಯಲ್ಲಿ ಆಗಮಿಸುವಂತೆ ತಿಳಿಸಲಾಗಿದೆ. ಕೋವೀಶೀಲ್ಡ್ ದ್ವಿತೀಯ ಲಸಿಕೆ ಅಗತ್ಯವಿರುವ ಮಂದಿ ಬರಬೇಕಾಗಿಲ್ಲ.
ಕಾಲೇಜು ವಿದ್ಯಾರ್ಥಿಗಳಿಗಾಗಿ ಕೋವಾಕ್ಸೀನ್ ಲಸಿಕೆ ನೀಡುವ ನಿಟ್ಟಿನಲ್ಲಿ ಕುಂಬಳೆ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಸಜ್ಜೀಕರಣ ನಡೆಸಲಾಗಿದೆ. ಕಾಲೇಜಿನ ಗುರುತುಚೀಟಿ ಸಹಿತ ಹಾಜರಾಗಿ ನೋಂದಣಿ ನಡೆಸಿರುವ ಮೊದಲ 300 ಮಂದಿಗೆ ಲಸಿಕೆ ನೀಡಲಾಗುವುದು. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ವಾಕ್ಸಿನೇಷನ್ ಇರುವುದು.