ತಿರುವನಂತಪುರ: ರಾಜ್ಯದಲ್ಲಿ ಒಂದು ಮತ್ತು ಎರಡನೇ ಡೋಸ್ ಸೇರಿ ಈವರೆಗೆ(ಶನಿವಾರದ ವರೆಗೆ) ಒಟ್ಟು 2,01,39,113 ಮಂದಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. 1,40,89,658 ಮಂದಿಗೆ ಮೊದಲ ಡೋಸ್ ಮತ್ತು 60,49,455 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಇದರೊಂದಿಗೆ, ರಾಜ್ಯದ ಅಂದಾಜು 2021 ಜನಗಣತಿಯ ಶೇಕಡಾ 40.14 ಮಂದಿಗೆÉ ಮೊದಲ ಡೋಸ್ ಮತ್ತು ಶೇಕಡಾ 17.23 ಪ್ರತಿಶತದಷ್ಟು ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟ 52 ಶೇ. ಜನರಿಗೆ ಮೊದಲ ಡೋಸ್ ಮತ್ತು 23 ಶೇ. ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ 79 ಪ್ರತಿಶತದಷ್ಟು (89,98,405) ಮೊದಲ ಡೋಸ್ ಮತ್ತು 42 ಪ್ರತಿಶತ (47,44,870) ಎರಡನೇ ಡೋಸ್ ನೀಡಲಾಗಿದೆ. ಒಂದು ಹನಿ ಕೂಡ ವ್ಯರ್ಥ ಮಾಡದೆ ಲಸಿಕೆ ನೀಡಿದ ಎಲ್ಲರನ್ನು ಶ್ಲಾಘಿಸುತ್ತೇನೆ ಎಂದು ಸಚಿವರು ಹೇಳಿದರು.
ಮಹಿಳೆಯರು ಲಸಿಕೆ ಪಡೆಯುವಲ್ಲಿ ಮೊದಲಿಗರಾಗಿದ್ದಾರೆ. 1,04,71,907 ಮಹಿಳೆಯರು ಮತ್ತು 96,63,620 ಪುರುಷರಿಗೆ ಲಸಿಕೆ ಹಾಕಲಾಗಿದೆ. 18 ರಿಂದ 45 ವರ್ಷ ವಯಸ್ಸಿನ ಇಪ್ಪತ್ತೈದು ಪ್ರತಿಶತ (37,01,130) ಮೊದಲ ಡೋಸ್ ಪಡೆದರು. ಮೊದಲ ಡೋಸ್ ಪಡೆದ 12 ವಾರಗಳ ನಂತರ ಅವರು ಎರಡನೇ ಡೋಸ್ ಪಡೆಯುತ್ತಾರೆ. ಆದ್ದರಿಂದ, 3,05,308 ಜನರು (2 ಪ್ರತಿಶತ) ಎರಡನೇ ಡೋಸ್ ತೆಗೆದುಕೊಳ್ಳಲು ಸಾಧ್ಯವಾಯಿತು. ರಾಜ್ಯದಲ್ಲಿ ವ್ಯಾಕ್ಸಿನೇಷನ್ ಜನವರಿ 16, 2021 ರಂದು ಆರಂಭವಾಯಿತು.
ಲಸಿಕೆಯನ್ನು ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಯಿತು. ಮೊದಲ ಹಂತದಲ್ಲಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸಿಬ್ಬಂದಿ, ಕ್ಷೇತ್ರ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಯಿತು. ರಾಜ್ಯದ ಶೇ .100 ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುಂಚೂಣಿ ಹೋರಾಟಗಾರರಿಗೆ ಮೊದಲ ಡೋಸ್ ಮತ್ತು ಶೇ .82 ಕ್ಕೆ ಎರಡನೇ ಡೋಸ್ ನೀಡಲಾಗಿದೆ.
ಶುಕ್ರವಾರ ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆಗಳನ್ನು (5,15,241) ನೀಡಲಾಗಿದೆ. ಜುಲೈ 24 ರಂದು 4.91 ಲಕ್ಷ ಜನರಿಗೆ ಲಸಿಕೆ ಹಾಕಲಾಗಿತ್ತು. ಹೆಚ್ಚು ಲಸಿಕೆಗಳು ಲಭ್ಯವಿದ್ದಲ್ಲಿ ಈ ರೀತಿಯ ಲಸಿಕೆ ನೀಡಲು ಸಾಧ್ಯವಿದೆ. ಶನಿವಾರ ರಾಜ್ಯದಲ್ಲಿ 3,59,517 ಮಂದಿ ಜನರಿಗೆ ಲಸಿಕೆ ಹಾಕಲಾಗಿದೆ. ನಿನ್ನೆ(ಭಾನುವಾರ) 1,546 ಲಸಿಕೆ ಕೇಂದ್ರಗಳಿದ್ದವು.
ಸರ್ಕಾರಿ ಮಟ್ಟದಲ್ಲಿ 1,280 ಕೇಂದ್ರಗಳು ಮತ್ತು ಖಾಸಗಿ ಮಟ್ಟದಲ್ಲಿ 266 ಕೇಂದ್ರಗಳು ಭಾನುವಾರ ಲಸಿಕೆ ವಿತರಿಸಿದವು. ನಿನ್ನೆ ರಾಜ್ಯದಲ್ಲಿ ನಾಲ್ಕು ಲಕ್ಷ ಡೋಸ್ ಲಸಿಕೆ ಲಭ್ಯವಾಗಿದೆ. ಕೋವಿ ಶೀಲ್ಡ್ ಲಸಿಕೆ ತಿರುವನಂತಪುರಂನಲ್ಲಿ 1,35,440, ಎರ್ನಾಕುಲಂನಲ್ಲಿ 1,57,460 ಮತ್ತು ಕೋಝಿಕ್ಕೋಡ್‍ನಲ್ಲಿ 1,07,100 ಡೋಸ್‍ಗಳಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಇದುವರೆಗೆ 1,82,61,470 ಡೋಸ್ ಲಸಿಕೆ ಲಭ್ಯವಿದೆ.