ತಿರುವನಂತಪುರ: ಅಂಗಡಿಗಳಿಗೆ ತೆರಳುವವರು ಆರ್‍ಟಿಪಿಸಿಆರ್ ಋಣಾತ್ಮಕ ಪ್ರಮಾಣಪತ್ರ ಅಥವಾ ಲಸಿಕೆ ಪುರಾವೆ ದಾಖಲೆಗಳನ್ನು ಹೊಂದಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮುಖ್ಯ ಕಾರ್ಯದರ್ಶಿಯ ಆದೇಶವನ್ನು ಬದಲಿಸಲಾಗದು ಎಂದು ವಿಧಾನಸಭೆಗೆ ತಿಳಿಸಿದರು. ಸರ್ಕಾರದ ಸಚಿವಾಲಯಕ್ಕೆ ವಿಶೇಷ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿರುವ ಈ ನೀತಿಯನ್ನು ಮುಖ್ಯ ಕಾರ್ಯದರ್ಶಿಯ ಆದೇಶದ ಮೇರೆಗೆ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವರು ವಿವರಿಸಿದರು.
ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು, ಅಂಗಡಿಗಳು ಮತ್ತು ಸಂಸ್ಥೆಗಳನ್ನು ಪುನಃ ತೆರೆಯುವ ನಿರ್ಧಾರವು ನಿರಂತರ ಬೇಡಿಕೆಯಿಂದಾಗಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಮುಖ್ಯ ಕಾರ್ಯದರ್ಶಿ ಅಂಗಡಿಗಳ ಬಾಗಿಲು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರ ಅಂಗಡಿ-ಮುಗ್ಗಟ್ಟುಗಳಿಗೆ ಜನರು ಬರಬೇಕೆಂಬ ಸರ್ಕಾರದ ನಿರ್ಧಾರ ಹಿನ್ನಡೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಪೋಲೀಸ್ ತಪಾಸಣೆ ಇಲ್ಲದಿರುವುದರಿಂದ, ತಪಾಸಣೆಯನ್ನು ನೌಕರರೇ ಮಾಡುತ್ತಾರೆ. ಆದರೆ ದಟ್ಟಣೆ ಹೆಚ್ಚಿರುವಲ್ಲಿ ಗ್ರಾಹಕರ ತಪಾಸಣೆ ಅಸಾಧ್ಯವಾಗಿ ಗೊಂದಲಗಳಿಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.