HEALTH TIPS

ಬೆಂಗಳೂರು ಮೀರಿಸಿದ ಮಂಗಳೂರು: ಕೊರೊನಾ ನಿಯಂತ್ರಣ ತಪ್ಪುತ್ತಿದೆ ದಕ್ಷಿಣ ಕನ್ನಡದಲ್ಲಿ!

               ಕೋವಿಡ್ ಎರಡನೇ ಆರಂಭವಾದ ನಂತರ ಬೆಂಗಳೂರು ನಗರವನ್ನು ಹೊರತು ಪಡಿಸಿ ಬಹುತೇಕ ಎರಡನೇ ಸ್ಥಾನದಲ್ಲಿದ್ದ ಕುಖ್ಯಾತಿಗೆ ಒಳಗಾಗಿದ್ದು ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ. ಈ ಎರಡೂ ಜಿಲ್ಲೆಗಳು ಬೇರೆ ರಾಜ್ಯದ ಗಡಿಗೆ ಹೊಂದಿಕೊಂಡಿದೆ.


          ಜಿಲ್ಲಾಡಳಿತದ ಬಿಗಿ ಕ್ರಮಗಳಿಂದ ಮೈಸೂರು ಜಿಲ್ಲೆ ನಿಧಾನವಾಗಿ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾ ಬರುತ್ತಿದೆ. ಆದರೆ, ದಕ್ಷಿಣ ಕನ್ನಡ ಇದೇ ದಾರಿಯಲ್ಲಿ ಸಾಗುತ್ತಿದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ, ದೈನಂದಿನ ಪ್ರಕರಣದಲ್ಲಿ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ.

         ದಕ್ಷಿಣ ಕನ್ನಡ ಜಿಲ್ಲಾಡಳಿತದ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೇಲೆ ಸಿಎಂ ಸಿಟ್ಟಾಗಿದ್ದು ಗೊತ್ತಿರುವ ವಿಚಾರ.

             ದಕ್ಷಿಣ ಕನ್ನಡದ ಭಾಗದಲ್ಲಿ ಕೇರಳದ ಪ್ರಭಾವ ಹೆಚ್ಚು. ತಲಪಾಡಿ ಮತ್ತು ಇತರ ಮಾರ್ಗಗಳ ಮೂಲಕ ಜಿಲ್ಲೆಗೆ, ಅದರಲ್ಲೂ ಪ್ರಮುಖವಾಗಿ ಜಿಲ್ಲಾಕೇಂದ್ರ ಮಂಗಳೂರಿಗೆ ದಿನೇ ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ಕೇರಳದಲ್ಲಿ ದೇಶದ ಅರ್ಧದಷ್ಟು ಪ್ರಕರಣ ವರದಿಯಾಗುತ್ತಿರುವುದರಿಂದ ಕರ್ನಾಟಕ ಸರಕಾರ ಕೆಲವು ನಿರ್ಬಂಧನೆಗಳನ್ನು ವಿಧಿಸಿತ್ತು.


               ವಾಮಮಾರ್ಗಗಳಿಂದ ಬಂದು ಹೋಗುತ್ತಿರುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ

          ಕೇರಳದಿಂದ ದಕ್ಷಿಣ ಕನ್ನಡಕ್ಕೆ ಆಗಮಿಸುವವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವುದನ್ನು ಕರ್ನಾಟಕ ಸರಕಾರ ಕಡ್ಡಾಯಗೊಳಿಸಿತ್ತು. ಅದು ಕೇರಳಿಗರ ಸಿಟ್ಟಿಗೆ ಕಾರಣವಾಗಿತ್ತು. ಆದರೆ, "ಇದಕ್ಕೆಲ್ಲಾ ತಲೆಕೆಡಿಸಿಕೊಂಡು ಕೂರಲು ಸಾಧ್ಯವಿಲ್ಲ. ವರದಿ ನೆಗೆಟೀವ್ ಬಂದರೆನೇ ಎಂಟ್ರಿ, ದಟ್ಸ್ ಆಲ್" ಎಂದು ಸಿಎಂ ಖಡಕ್ಕಾಗಿ ಹೇಳಿದ್ದರು. ಆದರೂ, ವಾಮಮಾರ್ಗಗಳಿಂದ ಜಿಲ್ಲೆಗೆ ಬಂದು ಹೋಗುತ್ತಿರುವವರಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.

                ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕಿಂತ ಮುಂಚೆ ಬರುವ ಸ್ಟೇಷನ್ ಗಳು

           ಎರಡು ದಿನಗಳ ಕರಾವಳಿ ಭೇಟಿಯ ವೇಳೆ, ಸಿಎಂ ಬೊಮ್ಮಾಯಿಯವವರು ದಕ್ಷಿಣ ಕನ್ನಡ ಗಡಿಭಾಗದಲ್ಲಿ ಪರಿಶೀಲನೆ ನಡೆಸುವವರಿದ್ದರು. ಆದರೆ, ಕೇರಳಿಗರು ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ಗುಪ್ತಚರ ಎಚ್ಚರಿಕೆಯ ನಂತರ, ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ಕೇರಳದಿಂದ ಅತಿಹೆಚ್ಚಿನ ಸಂಖ್ಯೆಯ ರೈಲುಗಳು ಮಂಗಳೂರಿಗೆ ಆಗಮಿಸುತ್ತವೆ. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕಿಂತ ಮುಂಚೆ ಬರುವ ಸ್ಟೇಷನ್ ಗಳಲ್ಲಿ ಇಳಿದು ಯಾವುದೇ ತಪಾಸಣೆ ಇಲ್ಲದೇ, ಮಂಗಳೂರಿಗೆ ಆಗಮಿಸುವ ಘಟನೆಗಳೂ ವರದಿಯಾಗಿವೆ.

                   ಬೆಂಗಳೂರು ನಗರವನ್ನು ಮೀರಿಸಿ ದಕ್ಷಿಣ ಕನ್ನಡ ನಂಬರ್ ಒನ್ ಸ್ಥಾನದಲ್ಲಿದೆ

        ಕಳೆದ ಒಂದು ವಾರದ ಹೊಸ ಪ್ರಕರಣಗಳ ಸಂಖ್ಯೆಯನ್ನುಅವಲೋಕಿಸಿದಾಗ, ಬೆಂಗಳೂರು ನಗರವನ್ನು ಮೀರಿಸಿ ದಕ್ಷಿಣ ಕನ್ನಡ ನಂಬರ್ ಒನ್ ಸ್ಥಾನದಲ್ಲಿದೆ. ಬೆಂಗಳೂರಿನ ಮತ್ತು ದಕ್ಷಿಣ ಕನ್ನಡದ ಜನಸಂಖ್ಯೆಯನ್ನು ಅವಲೋಕಿಸಿದಾಗ, ಕೋವಿಡ್ ಅಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ಸ್ಪಷ್ಟ. ಹೊಸ ಪ್ರಕರಣಗಳು ಅಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಿನ ಏರಿಕೆಯಾಗಿಲ್ಲ.

                    ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಹೊಸ ಪ್ರಕರಣಗಳ ಸಂಖ್ಯೆ

          ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳ ಹೊಸ ಪ್ರಕರಣ 321, 377, 315. ಕಳೆದ ಒಂದು ವಾರದ ಹೆಲ್ತ್ ಬುಲೆಟಿನ್ ಅವಲೋಕಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಹೊಸ ಪ್ರಕರಣಗಳ ಸಂಖ್ಯೆ ಹೀಗಿದೆ.

ದಿನಾಂಕ: ಆಗಸ್ಟ್ 6, ಹೊಸ ಪ್ರಕರಣ: 411
ದಿನಾಂಕ: ಆಗಸ್ಟ್ 7, ಹೊಸ ಪ್ರಕರಣ: 342
ದಿನಾಂಕ: ಆಗಸ್ಟ್ 8, ಹೊಸ ಪ್ರಕರಣ: 438
ದಿನಾಂಕ: ಆಗಸ್ಟ್ 9, ಹೊಸ ಪ್ರಕರಣ: 273
ದಿನಾಂಕ: ಆಗಸ್ಟ್ 10, ಹೊಸ ಪ್ರಕರಣ: 378
ದಿನಾಂಕ: ಆಗಸ್ಟ್ 11, ಹೊಸ ಪ್ರಕರಣ: 422
ದಿನಾಂಕ: ಆಗಸ್ಟ್ 12, ಹೊಸ ಪ್ರಕರಣ: 475

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries