ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕದ ನಡುವೆ ಶಾಲಾ ಕ್ಯಾಂಪಸ್‌ಗಳನ್ನು ಪುನರಾರಂಭ ಮಾಡುವ ಚರ್ಚೆಗೆ ತಕ್ಷಣದ ಉತ್ತರವಿಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ಹೇಳಿದ್ದಾರೆ.
ಪ್ರತಿ ಭಾನುವಾರ ಆಯೋಜಿಸಿದ್ದ ಆನ್‌ಲೈನ್ ಚರ್ಚೆಯಲ್ಲಿ ಮಾತನಾಡಿದ ಸೇನ್, ಶಾಲೆಗಳು ಬಂದ್ ಆಗಿರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಕ್ಯಾಂಪಸ್‌ಗಳು ಮತ್ತೆ ತೆರೆದರೆ ಅವರ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದಾರೆ.
"ಅಮೇರಿಕಾದಲ್ಲಿ, ಈ ವಿಷಯದ ಬಗ್ಗೆ ಎರಡು ಗುಂಪುಗಳ ನಡುವೆ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಆದರೆ, ಬಿರ್ಭೂಮ್‌ನ ಪೂರ್ವದಲ್ಲಿ ಅನ್ವಯಿಸಬಹುದಾದದ್ದು, ಬಂಕುರಾ ಪಶ್ಚಿಮದಲ್ಲಿ ಕೆಲಸ ಮಾಡದಿರಬಹುದು. ಪ್ರತ್ಯುತ್ತರ ರೆಡಿಮೇಡ್ ಇರಲು ಸಾಧ್ಯವಿಲ್ಲ, ಅದಕ್ಕೆ ತಕ್ಷಣ ಉತ್ತರ ನೀಡುವ ಪರಿಸ್ಥಿತಿ ಇಲ್ಲ" ಎಂದು ಸೇನ್ ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದ ಮೌಲ್ಯಮಾಪನ ಮಾದರಿಯಲ್ಲಿ ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ಹಂಚಿಕೊಳ್ಳುವುದು ಹೆಚ್ಚು ಮುಖ್ಯ ಎಂದು ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.
"ನಾವು ಮೌಲ್ಯಮಾಪನಕ್ಕೆ ಒತ್ತು ನೀಡಿದರೂ ಅದು ಕೊನೆಯ ವಿಷಯ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಜ್ಞಾನವನ್ನು ಪಡೆದುಕೊಳ್ಳುವುದು ಮತ್ತು ಹಂಚಿಕೊಳ್ಳುವುದು ಮೊದಲು ಆದ್ಯತೆಯಾಗಿದೆ. ಈ ಸಮಸ್ಯೆಯನ್ನು ವಿವಿಧ ಕಡೆಯಿಂದ ಮತ್ತು ದೃಷ್ಟಿಕೋನದಿಂದ ನೋಡಬೇಕು ಎಂದು" ಎಂದಿದ್ದಾರೆ.