HEALTH TIPS

ನಿಯಂತ್ರಣ ಬಿಗಿಗೊಳಿಸಿದ ಕರ್ನಾಟಕ; ಕಾಸರಗೋಡಿನಿಂದ ಮಂಗಳೂರಿಗೆ ಬಸ್ ಸಂಚಾರ ತಲಪ್ಪಾಡಿ ವರೆಗೆ ಮಾತ್ರ: ಕೆ.ಎಸ್.ಆರ್.ಟಿ.ಸಿ.

                  ತಿರುವನಂತಪುರ; ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಆದೇಶಾನುಸಾರ ಕೇರಳದಿಂದ ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಮತ್ತು ಕಾಸರಗೋಡು-ಪುತ್ತೂರಿಗೆ ತೆರಳುವ  ಬಸ್ಸುಗಳು ನಾಳೆ (ಆಗಸ್ಟ್ 2) ರಿಂದ ಮುಂದಿನ  ಒಂದು ವಾರದವರೆಗೆ ಕರ್ನಾಟಕವನ್ನು ಪ್ರವೇಶಿಸಲು ನಿರ್ಬಂಧಿಸಲಾಗಿದೆ. 

              ಆದರೆ ಕೆಎಸ್‍ಆರ್‍ಟಿಸಿ ಬೆಂಗಳೂರಿಗೆ ಸೇವೆಗಳನ್ನು ನಿರ್ವಹಿಸುವುದಾಗಿ ಹೇಳಿದೆ. ಬೆಂಗಳೂರಿಗೆ ಪ್ರಸ್ತುತ ಮುತ್ತಂಙ ಮತ್ತು ಮಾನಂತವಾಡಿಗಳಿಂದ ಸಂಚಾರ ನಡೆಸುತ್ತಿದೆ. ಒಂದು ಸುಖಾಸೀನ ಬಸ್ ಮತ್ತು 14 ಡಿಲಕ್ಸ್ ಎಕ್ಸ್ ಪ್ರೆಸ್ ಬಸ್ ಗಳು ತಿರುವನಂತಪುರಂ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ.

                    ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವವರು 72 ಗಂಟೆಗಳಲ್ಲಿ ಮಾಡಿರುವ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ಪ್ರಮಾಣಪತ್ರವನ್ನು ಅಧಿಕೃತರಿಗೆ ತೋರಿಸಿ ತೆರಳಬಹುದಾಗಿದೆ. ನಾಳೆಯಿಂದ ಕಾಸರಗೋಡು, ಪುತ್ತೂರು, ಸುಳ್ಯಗಳಿಗೆ ಸಂಚರಿಸುವ ಬಸ್ ಗಳು ಗಡಿಗಳ ವರೆಗೆ ಮಾತ್ರ ಸಂಚರಿಸಲಿವೆ.

                              ಕೇರಳದಿಂದ ಬೆಂಗಳೂರು, ಮೈಸೂರು ಮತ್ತು ಹಿಂತೆರಳುವ ಸಂಚಾರಗಳು: 

            ತಿರುವನಂತಪುರಂ - ಬೆಂಗಳೂರು (ಸಂಜೆ 5 ಗಂಟೆ), ತಿರುವನಂತಪುರಂ - ಬೆಂಗಳೂರು (ಸಂಜೆ 6.30), ಕಣ್ಣೂರು - ಬೆಂಗಳೂರು (ಬೆಳಿಗ್ಗೆ 7.35), ಕಣ್ಣೂರು - ಬೆಂಗಳೂರು (ರಾತ್ರಿ 9.30), ತಲಶ್ಶೇರಿ - ಬೆಂಗಳೂರು (ರಾತ್ರಿ 8.16), ವಡಕರ - ಬೆಂಗಳೂರು ( ರಾತ್ರಿ 8), ಪಯ್ಯನ್ನೂರು - ಬೆಂಗಳೂರು (ಸಂಜೆ 6.01), ಕೋಝಿಕ್ಕೋಡ್ - ಬೆಂಗಳೂರು (ಬೆಳಿಗ್ಗೆ 7), ಕೋಝಿಕ್ಕೋಡ್ - ಬೆಂಗಳೂರು (ಬೆಳಿಗ್ಗೆ 8.34), ಕೋಝಿಕ್ಕೋಡ್ - ಬೆಂಗಳೂರು (ಬೆಳಿಗ್ಗೆ 10), ಕೋಝಿಕ್ಕೋಡ್ - ಬೆಂಗಳೂರು (ಮಧ್ಯಾಹ್ನ 1.30), ಕೋಝಿಕ್ಕೋಡ್ -ಬೆಂಗಳೂರು (6 ಸಂಜೆ), ಕೋಝಿಕ್ಕೋಡ್ - ಬೆಂಗಳೂರು (7.01 ಸಂಜೆ, ಕೋಝಿಕ್ಕೋಡ್ - ಬೆಂಗಳೂರು (8.01 ರಾತ್ರಿ.),  ಕೋಝಿಕ್ಕೋಡ್ - ಬೆಂಗಳೂರು (ರಾತ್ರಿ 10.03), ಕಲ್ಪೆಟ್ಟಾ - ಮೈಸೂರು (ಬೆಳಿಗ್ಗೆ 5), ಕೋಝಿಕ್ಕೋಡ್ - ಮೈಸೂರು (ಬೆಳಿಗ್ಗೆ 10.30), ಕೋಯಿಕ್ಕೋಡ್ - ಮೈಸೂರು (ಬೆಳಿಗ್ಗೆ 11.15)

                                ಬೆಂಗಳೂರುರಿಂದ ಕೇರಳಕ್ಕೆ ಸೇವೆಗಳು:

      ಬೆಂಗಳೂರು- ಕೋಝಿಕ್ಕೋಡ್ (ಬೆಳಿಗ್ಗೆ 8), ಬೆಂಗಳೂರು- ಕೋಝಿಕ್ಕೋಡ್ (ಬೆಳಿಗ್ಗೆ 10.03), ಬೆಂಗಳೂರು- ಕೋಝಿಕ್ಕೋಡ್ (ಮಧ್ಯಾಹ್ನ 12), ಬೆಂಗಳೂರು- ಕೋಝಿಕ್ಕೋಡ್ (2.03 ಮಧ್ಯಾಹ್ನ), ಬೆಂಗಳೂರು- ಕೋಝಿಕ್ಕೋಡ್ (ರಾತ್ರಿ 8) ಬೆಂಗಳೂರು - ಕೋಝಿಕ್ಕೋಡ್ (9.31) ರಾತ್ರಿ), ಬೆಂಗಳೂರು - ಕೋಝಿಕ್ಕೋಡ್ (10.30 ರಾತ್ರಿ), ಬೆಂಗಳೂರು - ಕೋಝಿಕ್ಕೋಡ್ (11 ರಾತ್ರಿ), ಬೆಂಗಳೂರು - ತಿರುವನಂತಪುರಂ (ರಾತ್ರಿ 3.25 ), ಬೆಂಗಳೂರು ತಿರುವನಂತಪುರ (6.30 ರಾತ್ರಿ), ಬೆಂಗಳೂರು - ಕಣ್ಣೂರು (9 ರಾತ್ರಿ), ಬೆಂಗಳೂರು - ಕಣ್ಣೂರು (ರಾತ್ರಿ 9.30), ಬೆಂಗಳೂರು - ತಲಶ್ಶೇರಿ (ರಾತ್ರಿ 8.31),

ಬೆಂಗಳೂರು - ವಡಕರ (ರಾತ್ರಿ 9.15), ಮೈಸೂರು - ಕಲ್ಪೆಟ್ಟಾ (ಸಂಜೆ 5.45), ಮೈಸೂರು - ಕೋಯಿಕ್ಕೋಡ್ (9 ರಾತ್ರಿ), ಮೈಸೂರು - ಕೋಯಿಕ್ಕೋಡ್ (10.15 ರಾತ್ರಿ), ಮೈಸೂರು - ಕೋಯಿಕ್ಕೋಡ್ (5 ಮುಂಜಾನೆ), ಬೆಂಗಳೂರು - ಪಯ್ಯನ್ನೂರು (9 ಬೆಳಿಗ್ಗೆ) ಸಂಚರಿಸಲಿವೆ. ಬಸ್‍ಗಳ ವೇಳಾಪಟ್ಟಿಗಳು ಮತ್ತು ಟಿಕೆಟ್‍ಗಳನ್ನುwww.online.keralartc.com ನಲ್ಲಿ ಮತ್ತು ಮೊಬೈಲ್ ಅಪ್ಲಿಕೇಶನ್ "“Ente KSRTC”  ಮೂಲಕ ಮುಂಚಿತವಾಗಿ ಕಾಯ್ದಿರಿಸಬಹುದು.


“Ente KSRTC App” Google Play Store  ಗೂಗಲ್ ಪ್ಲೇ ಸ್ಟೋರ್ ಲಿಂಕ್

https://play.google.com/store/apps/details?id=com.keralasrtc.app

           ಹೆಚ್ಚಿನ ಮಾಹಿತಿಗಾಗಿ ನಿಯಂತ್ರಣ ಕೊಠಡಿ- 9447071021,2463799 Whatsapp ಸಂಖ್ಯೆ- 81295 62972


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries