HEALTH TIPS

ದಕ್ಷಿಣ ಕೊರಿಯ ಯುವತಿಯರಿಂದ ಶಾರ್ಟ್ ಹೇರ್ ಕಟ್ ಅಭಿಯಾನ; ಕಾರಣ ಏನು?

           ಸಿಯೋಲ್'ಮಿ ಟೂ' ಹ್ಯಾಷ್ ಟ್ಯಾಗ್ ಅಭಿಯಾನ ನಮ್ಮೆಲ್ಲರ ಮನದಿಂದ ಮಾಸುವ ಮುನ್ನವೇ ದ.ಕೊರಿಯ ಮಹಿಳೆಯರು #women_shortcut_campaign ಎನ್ನುವ ನೂತನ ಹ್ಯಾಷ್ ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದರ ಹಿಂದಿನ ಘಟನೆ ಅತ್ಯಂತ ಸ್ವಾರಸ್ಯಕರವಾದುದು. ಏಕೆಂದರೆ ಆ ಅಭಿಯಾನಕ್ಕೆ ಪ್ರೇರಣೆ ದ.ಕೊರಿಯ ಬಿಲ್ಲುಗಾರ್ತಿ ಆನ್ ಸಾನ್. ಈಕೆ ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಿಂಪಿಕ್ಫ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾಳೆ. ಆದರೆ ತನ್ನ ಸಾಧನೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಆಕೆಗೆ ಆಗುತ್ತಿಲ್ಲ. ಏಕೆಂದರೆ ಅದಕ್ಕೆ ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಕೂದಲಿನ ವಿಚಾರವಾಗಿ ನಡೆದ ಟ್ರಾಲಿಂಗ್.

         ಆಕೆ ತುಂಡುಗೂದಲಿಗೆ ದೇಶದ ಪುರುಷ ಆನ್ ಲೈನ್ ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದ.ಕೊರಿಯಾದಲ್ಲಿ ತುಂಡುಗೂದಲನ್ನು ಹೊಂದಿದ ಯುವತಿಯರು, ಮಹಿಳೆಯರನ್ನು ಕೆಟ್ಟದಾಗಿ ಕಾಣುವ ಪ್ರವೃತ್ತಿಯಿದೆ. ತುಂಡುಗೂದಲು ಬಿಟ್ಟ ಯುವತಿಯರು ಸ್ತ್ರೀವಾದಿಗಳು ಎನ್ನುವ ಪರಿಕಲ್ಪನೆ ಅಲ್ಲಿನ ಸಮಾಜದ್ದು. ಅನೇಕ ದೇಶಗಳಲ್ಲಿ ಈ ಪರಿಕಲ್ಪನೆ ಇದೆ ಎನ್ನುವುದೂ ಸುಳ್ಳಲ್ಲ.

             ದ.ಕೊರಿಯಾದಲ್ಲಿ ತುಂಡುಗೂದಲು ಬಿಟ್ಟ ಯುವತಿಯರನ್ನು ಸ್ತ್ರೀವಾದಿಗಳೆಂದು ಹೀಗಳೆಯುವುದು ಮಾತ್ರವಲ್ಲ ಅವರನ್ನು ಪುರುಷ ದ್ವೇಷಿಗಳೆಂದೂ ಕಾಣುತ್ತಾರೆ. ಹೀಗಾಗಿಯೇ ಒಲಿಂಪಿಕ್ಸ್ ಪದಕ ಗೆದ್ದುದರ ಹೊರತಾಗಿಯೂ ಆನ್ ಸಾನ್ ರನ್ನು ಅಲ್ಲಿನ ಪುರುಷರು ಕುಹಕ ಪೋಸ್ಟ್ ಗಳಿಂದ ಚುಚ್ಚಿದ್ದರು. ದೇಶದ ತೆರಿಗೆ ಪಾವತಿದಾರರ ಹಣವನ್ನು ನಿನ್ನಂಥವರಿಗೆ ನೀಡಿದ್ದು ತುಂಡುಗೂದಲು ಬಿಡಲಲ್ಲ ಎಂಬಿತ್ಯಾದಿ ಪೋಸ್ಟ್ ಗಳು ಹರಿದಾಡಿದ್ದವು.

             ಇದರಿಂದ ಅಲ್ಲಿನ ಮಹಿಳಾ ಸಮುದಾಯ ಒಗ್ಗಟ್ಟಾಗಿ #women_shortcut_campaign ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಆನ್ ಸಾನ್ ಅವರಿಗೆ ಬೆಂಬಲವಾಗಿ ದ.ಕೊರಿಯ ಯುವತಿಯರು ತಮ್ಮ ಉದ್ದಗೂದಲನ್ನು ತುಂಡಾಗಿಸಿ ಫೋಟೋ ತೆಗೆದು #women_shortcut_campaign ಎಂದು ನಮೂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries