ತಿರುವನಂತಪುರಂ: ಕೋವಿಡ್ ಆರಂಭಗೊಂಡ ಬಳಿಕ ಪ್ರತಿನಿತ್ಯ ಸಂಜೆ ಸುದ್ದಿಗೋಷ್ಠಿ ನಡೆಸಿ ರಾಜ್ಯದ ದೈನಂದಿನ ಸೋಂಕು ಹರಡುವಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಮುಖ್ಯಮಂತ್ರಿ ಇತ್ತೀಚೆಗೆ ಈ ಪರಿಪಾಠದಿಂದ ಹಿಂದೆ ಸರಿದಿದ್ದು, ಈ ಮಧ್ಯೆ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಹಲವು ದಿನಗಳಿಂದ ಸುದ್ದಿಗೋಷ್ಠಿ ನಡೆಸದಿರುವ ಬಗ್ಗೆ ಕಾರಣಗಳನ್ನು ವಿವರಿಸಿದ್ದಾರೆ.
ವಿಧಾನಸಭೆ ಅಧಿವೇಶನ ಮತ್ತು ಓಣಂ ಗಡುವು ಕಾರಣ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಲಾಗಿತ್ತೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾತ್ಮ ಅಯ್ಯಂಕಾಳಿ ಮತ್ತು ಚಟ್ಟಂಬಿ ಸ್ವಾಮಿಯ ಸ್ಮರಣೆಯನ್ನೂ ಮುಖ್ಯಮಂತ್ರಿ ನಡೆಸಿದರು.
ಲಾಕ್‍ಡೌನ್ ನಿಬಂಧನೆsÀಗಳ ಸಡಿಲಿಕೆಯಿಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಓಣಂ ಅವÀಧಿಯ ಬಳಿಕ ವ್ಯಾಪಕಗೊಂಡಿದೆ ಎಂದು ಸಿಎಂ ಹೇಳಿದರು. ಈ ಪರಿಸ್ಥಿತಿಯನ್ನು ನಿರೀಕ್ಷಿಸಲಾಗಿತ್ತು ಮತ್ತು ಚಿಕಿತ್ಸಾ ಸೌಲಭ್ಯವನ್ನು ಬಲಪಡಿಸಲಾಗಿದೆ. ವ್ಯಾಕ್ಸಿನೇಷನ್ ವೇಗವಾಗಿ ಪ್ರಗತಿಯಲ್ಲಿದೆ ಎಂದರು.
ಸಾಮಾಜಿಕ ರೋಗನಿರೋಧಕ ಶಕ್ತಿಯನ್ನು ಬೇಗನೆ ಸಾಧಿಸಬಹುದು ಎಂದು ನಿರೀಕ್ಷಿಸಬಹುದು. ಜನಸಂಖ್ಯೆಯ ದೃಷ್ಟಿಯಿಂದ ಕೇರಳವು ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ ಎಂದು ತಿಳಿಸಿದರು. ು ದಿನಕ್ಕೆ ಐದು ಲಕ್ಷ ಲಸಿಕೆಗಳನ್ನು ವಿತರಿಸಲು ಸಾಧ್ಯವಾಗಿದೆ ಎಂದರು.
ಮರಣ ಪ್ರಮಾಣವನ್ನು ನಿಯಂತ್ರಿಸಲಾಗುತ್ತಿದೆ. ಹೆಚ್ಚಿನ ಸಾವುಗಳು ವೃದ್ಧಾಪ್ಯ ಮತ್ತು ಇತರ ರೋಗಗಳಿಂದಾಗಿವೆ. ಅವರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಯಿತು. ರಾಜ್ಯವು ಜನರ ಜೀವ ಉಳಿಸಲು ಮೊದಲಿನಿಂದಲೂ ಕೆಲಸ ಮಾಡುತ್ತಿದೆ. ಈ ಕಾರಣದಿಂದ ರಾಜ್ಯ ಪ್ರಶಂಸನೆಗೊಳಗಾಯಿತು. ಮೂರನೇ ಅಲೆಯ ಸಾಧ್ಯತೆಯೊಂದಿಗೆ, ಹೆಚ್ಚು ಎಚ್ಚರಿಕೆಯಿಂದ ಮುಂದುವರಿಯುವುದು ಅಗತ್ಯ ಎಂದು ಸಿಎಂ ಹೇಳಿದರು.