ಕಲ್ಪಟ್ಟ: ಆದಿವಾಸಿಗಳು ಸೇರಿದಂತೆ 18 ವರ್ಷಕ್ಕಿಂತ ಮೇಲ್ಪಟ್ಟ 22,616 ಮಂದಿ ಜನರನ್ನು ಹೊಂದಿರುವ ವಯನಾಡ್ ಜಿಲ್ಲೆಯ ಮೊದಲ ಬುಡಕಟ್ಟು ಪಂಚಾಯಿತಿಯಾದ ನೂಲ್ಪುಳ ಇದೀಗ ಕೋವಿಡ್ ವ್ಯಾಕ್ಸಿನೇಶನ್ ಪೂರ್ಣಗೊಳಿಸಿದ ಪದ್ರದೇಶವಾಗಿ ಗುರುತಿಸಿಕೊಂಡಿದೆ. ಈ ಪೈಕಿ 21,964 ಮಂದಿ ಜನರು ಲಸಿಕೆಯ ಮೊದಲ ಡೋಸ್ ಪಡೆದಿರುವರು.
ನೂಲ್ಪುಳವು ರಾಜ್ಯದ ಎರಡನೇ ದೊಡ್ಡ ಗ್ರಾಮ ಪಂಚಾಯತ್ ಆಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ 7602 ಮಂದಿ ಆದಿವಾಸಿಗಳಿಲ್ಲಿದ್ದಾರೆ. ಈ ಪೈಕಿ, 7352 ಮಂದಿಗೆ ಲಸಿಕೆಯ ಮೊದಲ ಡೋಸ್ ಪಡೆದರು. ವಿಶೇಷ ಬುಡಕಟ್ಟು ಲಸಿಕಾ ಶಿಬಿರವನ್ನು ಆಯೋಜಿಸುವ ಮೂಲಕ 6975 ಮಂದಿ ಜನರಿಗೆ ಲಸಿಕೆಯನ್ನು ನೀಡಲಾಯಿತು. ಕೋವಿಡ್ ಪಾಸಿಟಿವ್ ಮತ್ತು ಮೂರು ತಿಂಗಳೊಳಗೆ ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿರುವವರು ಮಾತ್ರ ಲಸಿಕೆ ಸ್ವೀಕರಿಸಿಲ್ಲ.
ಪಂಚಾಯಿತಿಯ ವಿವಿಧ ಭಾಗಗಳಲ್ಲಿ ಐದು ಶಾಲೆಗಳಲ್ಲಿ ಶಿಬಿರ ನಡೆಯಿತು. ಬುಡಕಟ್ಟು ಇಲಾಖೆಯ ನೇತೃತ್ವದಲ್ಲಿ ವಾಹನಗಳಲ್ಲಿ ಶಿಬಿರಗಳಿಗೆ ಜನರನ್ನು ಕರೆತರಲಾಯಿತು. ಇದರ ಜೊತೆಯಲ್ಲಿ, ಶಿಬಿರವನ್ನು ತಲುಪಲು ಮತ್ತು ಲಸಿಕೆ ಪಡೆಯಲು ಸಾಧ್ಯವಾಗದವರಿಗೆ ಬುಡಕಟ್ಟು ಇಲಾಖೆಯ ನೆರವಿನಿಂದ ನೇರವಾಗಿ ಕಾಲೋನಿಗಳಲ್ಲಿ ಲಸಿಕೆಯನ್ನು ನೀಡಲಾಯಿತು.
ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪೋನ್ ಸಂಖ್ಯೆಯಂತಹ ದಾಖಲೆಗಳಿಲ್ಲದೆ ಕಾಲೋನಿಗಳಲ್ಲಿ ವಾಸಿಸುವವರಿಗೆ, ಕೋವಿನ್ ಆಪ್ ವಿಶೇಷ ಸೌಲಭ್ಯವನ್ನು ಸ್ಥಾಪಿಸಿದೆ ಮತ್ತು ಕಾಲೋನಿಯಲ್ಲಿರುವ ವ್ಯಕ್ತಿಯ ರೆಫರೆನ್ಸ್ ಐಡಿ ಬಳಸಿ ಲಸಿಕೆಯನ್ನು ಲಭ್ಯವಾಗುವಂತೆ ಮಾಡಿದೆ.
ಗ್ರಾಮ ಪಂಚಾಯತ್ ಸಂಪೂರ್ಣ ಲಸಿಕೆಯನ್ನು ಘೋಷಿಸುವ ಮೊದಲು ಐದು ದಿನಗಳಲ್ಲಿ ಮಾಪ್ ಅಪ್ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ. ಆರ್‍ಆರ್‍ಟಿ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಸಹಾಯದಿಂದ ವಾರ್ಡ್ ಆಧಾರದ ಮೇಲೆ ಲಸಿಕೆ ಶಿಬಿರವನ್ನು ಆಯೋಜಿಸಲಾಗಿದೆ.