ತಿರುವನಂತಪುರ: ರಾಜ್ಯದಲ್ಲಿ ಲಸಿಕೆ ವಿತರಣೆ ಶೇ.80 ಪೂರ್ತಿಗೊಳಿಸಿದ ಮೂರು ಜಿಲ್ಲೆಗಲ್ಲಿ ಆರ್ ಟಿ ಪಿ ಎಸ್ ಆರ್ ತಪಾಸಣೆ ಮಾತ್ರ ಮಾಡಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋವಿಡ್ ಅವಲೋಕನ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಯನಾಡು, ಪತ್ತನಂತಿಟ್ಟ, ಎರ್ನಾಕುಳಂ ಜಿಲ್ಲೆಯ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಈಗಾಗಲೇ ಶೇ.80 ಪೂರ್ಣಗೊಂಡಿದೆ. ಅಲ್ಲದೆ ವಾಕ್ಸಿನೇಷನ್ ಶೇ.80 ರ ಹತ್ತಿರ ಬಂದಿರುವ ತಿರುವನಂತಪುರ, ಇಡುಕ್ಕಿ, ಕಾಸರಗೋಡು ಜಿಲ್ಲೆಗಳಲ್ಲೂ ಆರ್ಟಿಪಿಸಿಆರ್ ಪರೀಕ್ಷೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಎಲ್ಲ ಜಿಲ್ಲೆಗಳಲ್ಲಿ ಆರ್ಟಿಪಿಸಿಆರ್ ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಲು ಮುಖ್ಯಮಂತ್ರಿ ಸೂಚಿಸಿದರು.
ಜಿಲ್ಲೆಗಳಿಗೆ ವ್ಯಾಕ್ಸಿನ್ ವಿತರಣೆ ನಡೆಯುವಾಗ ಹೋಲಿಕೆ ಕಡಿಮೆಯಾದ ವಾಕ್ಸಿನೇಷನ್ ನಡೆದ ಜಿಲ್ಲೆಗಳನ್ನು ಪರಿಗಣಿಸಿ ಸ್ಥಳೀಯಾಡಳಿತ ಸಂಸ್ಥೆಗಳು ಕ್ರಮೀಕರರಿಸಬೇಕು. ವಾಕ್ಸಿನೇಶನ್ ಗಳ ಲೆಕ್ಕಾಚಾರವನ್ನು ಆನುಪಾತಿಕವಾಗಿ ವ್ಯಾಕ್ಸಿನ್ ನಡೆಸಲು ಜಿಲ್ಲೆಗಳು ಗಮನಿಸಬೇಕು.
ಕೋವಿಡ್ ಪ್ರಭೇದವನ್ನು ಕಂಡುಕೊಂಡ ರಾಜ್ಯಗಳಿಂದ ಬರುವವರನ್ನು ಪರೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಅವರನ್ನು ಆರ್ಡಿಪಿಸಿಆರ್ ಪರೀಕ್ಷೆಗೆ ಒಳಪಡಿಸಲು ತ್ವರಿತ ತಪಾಸಣೆಗೆ ಸ್ಥಳೀಯಾಡಳಿತ ಸಂಸ್ಥೆಗಳು ತಯಾರಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಸ್ತುತ ಡಬ್ಯುಐಪಿಆರ್ ಹೆಚ್ಚಿರುವ ಪಂಚಾಯತ್‍ಗಳಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿರಲಿದೆ.
ಗ್ರಾಮ ಪಂಚಾಯತ್‍ಗಳು ವಾರ್ಡ್‍ಗಳಲ್ಲಿನ ಕೋವಿಡ್ ಪರಿಶೀಲನಾ ಮಾಹಿತಿಯನ್ನು ಸಂಗ್ರಹಿಸಬೇಕು. ಶಿಕ್ಷಕರನ್ನು ಇದಕ್ಕೆ ಬಳಸಬಹುದಾಗಿದೆ.
ಪ್ರಸ್ತುತ 8 ಲಕ್ಷದ ಡೋಸ್ ವ್ಯಾಕ್ಸಿನ್ ರಾಜ್ಯಕ್ಕೆ ಲಭ್ಯವಾಗಿದೆ. ಐಸಿಯು ಹಾಸಿಗೆಗಳ ಮತ್ತು ವೆಂಟಿಲೇಟರ್‍ಗಳನ್ನು ಹೆಚ್ಚಿಸಲಾಗಿದೆ. ಮನೆಗಳಲ್ಲಿ ಇರುವ ಕೋವಿಡ್ ಬಾಧಿತದಲ್ಲಿ ವಾಕ್ಸಿನೇಷನ್ ಸ್ವೀಕರಿಸಿದ ನಂತರ ಕೋವಿಡ್ ಬಾಧಿಸಿದವರು ಎಷ್ಟು ಮಂದಿ ಇರುವರೆಂದು ತಿಳಿಯಲು ಮುಖ್ಯಮಂತ್ರಿ ಸೂಚಿಸಿದರು.