ತಿರುವನಂತಪುರ: ಕೇರಳದಲ್ಲಿ ಓಣಂ ಹಬ್ಬ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಬೀಚ್ ಹಾಗೂ ಮಾಲ್‍ಗಳನ್ನು ತೆರೆದುಕೊಡಲು ಸರ್ಕಾರ ತೀರ್ಮಾಣಿಸಿದೆ. ಪ್ರವಾಸಿಗರಿಗೆ ಆ. 9ರಿಂದ ಬೀಚ್‍ಗಳಿಗೆ ಪ್ರವೇಶಿಸಲು ಅನುಮತಿ ಕಲ್ಪಿಸಲಾಗಿದ್ದರೆ, 11ರಿಂದ ಮಾಲ್‍ಗಳು ತೆರೆದು ಕಾರ್ಯಾಚರಿಸಲಿದೆ. ಪ್ರಸಕ್ತ ಭಾನುವಾರ ಜಾರಿಯಲ್ಲಿರುವ ವಾರಾಂತ್ಯ ಲಾಕ್‍ಡೌನನ್ನು ತಾತ್ಕಾಲಿಕವಾಗಿ ಕೈಬಿಡಲು ತೀರ್ಮಾನಿಸಲಾಗಿದ್ದು, ಆ.9ರಿಂದ 28ರ ವರೆಗೆ ಮಾರುಕಟ್ಟೆ ಸಕ್ರಿಯವಾಗಿರಲಿದೆ. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ವ್ಯಾಪಾರಿ ಸಂಸ್ಥೆಗಳು ತೆರೆದು ಕಾರ್ಯಾಚರಿಸಬಹುದಾಗಿದೆ. ಎ.ಸಿ ಹೊರತುಪಡಿಸಿದ ರೆಸ್ಟಾರೆಂಟ್‍ಗಳಲ್ಲಿ ಕುಳಿತು ಆಹಾರಸೇವಿಸಲು ಅನುಮತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಒಂದು ಡೋಸ್ ವ್ಯಾಕ್ಸಿನೇಶನ್ ನಡೆಸಿದವರಿಗೆ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಲು ಹಾಗೂ ಮಾನದಂಡ ಪಾಲಿಸಿಕೊಂಡು ಬೀಚ್‍ಗಳಿಗೆ ತೆರಳಲು ಅವಕಾಶ ಕಲ್ಪಿಸಲಗಿದೆ. ಸಾಮಾಜಿಕ ಅಂತರ ಪಾಲನೆಯೊಂದಿಗೆ ಬುಧವಾರದಿಂದ ಮಾಲ್‍ಗಳನ್ನು ತೆರೆದುಕಾರ್ಯಾಚರಿಸಲು ತೀರ್ಮಾನಿಸಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ 33ಸಾವಿರ ಕೋಟಿ ರೂ. ನಷ್ಟ ಉಂಟಾಗಿರುವುದಾಗಿ ಎಂದು ಪ್ರವಾಸೋದ್ಯಮ ಸಚಿವ ಮೊಹಮ್ಮದ್ ರಿಯಾಸ್ ತಿಳಿಸಿದ್ದಾರೆ.