ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ ಎಂದರೆ, ನಾವು ಸೆಪ್ಟೆಂಬರ್ ತಿಂಗಳಿಗೆ ಕಾಲಿಡುತ್ತಿದ್ದೇವೆ ಎಂದರ್ಥ. ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸುವ ಗಣೇಶ ಚತುರ್ಥಿ ಸೇರಿದಂತೆ ನಾನಾ ಹಬ್ಬಗಳು, ವ್ರತಗಳು ಸೆಪ್ಟೆಂಬರ್ ತಿಂಗಳಲ್ಲೇ ಬರುತ್ತವೆ. ಹಾಗಾದ್ರೆ ಬನ್ನಿ, ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ಹಬ್ಬ-ಹರಿದಿನಗಳು, ವ್ರತ, ಉಪವಾಸ, ಪೂಜಾಚರಣೆಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸೆಪ್ಟೆಂಬರ್ 3 ಅಜ ಏಕಾದಶಿ:
ಸೆಪ್ಟೆಂಬರ್ 3 ರಂದು ಕೃಷ್ಣ ಪಕ್ಷದ ಏಕಾದಶಿ ಅಂದರೆ, ಅಜ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ ಪುಷ್ಯ ನಕ್ಷತ್ರವು ಅಜ ಏಕಾದಶಿಯ ದಿನದಂದು ಬರುತ್ತದೆ. ಆದ್ದರಿಂದ ಈ ದಿನದ ಉಪವಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸಿ, ಉಪವಾಸ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ನೇರವೇರುತ್ತವೆ.
ಸೆಪ್ಟೆಂಬರ್ 4 ಪ್ರದೋಷ ವ್ರತ:
ಪ್ರದೋಷ ವ್ರತವನ್ನು ಶಿವನಿಗೆ ಸಮರ್ಪಿಸಲಾಗಿದ್ದು, ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ. ಪ್ರದೋಷ ವ್ರತದ ದಿನದಂದು ಉಪವಾಸ ಕೈಗೊಳ್ಳುವ ಮೂಲಕ, ಜಾತಕದಲ್ಲಿ ಇರುವ ಚಂದ್ರನ ದೋಷದಿಂದ ಮುಕ್ತಿ ಪಡೆಯಬಹುದು. ಈ ಬಾರಿ ಪ್ರದೋಷ ವ್ರತವು ಶನಿವಾರ ಬಂದಿರುವುದರಿಂದ, ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ಶನಿ ದೇವನ ಆಶೀರ್ವಾದವನ್ನು ಪಡೆಯುತ್ತೀರಿ ಏಕೆಂದರೆ ಶನಿ ದೇವನನ್ನು ಶಿವಭಕ್ತ ಎಂದು ಪರಿಗಣಿಸಲಾಗುತ್ತದೆ.
ಸೆಪ್ಟೆಂಬರ್ 5 ಮಾಸ ಶಿವರಾತ್ರಿ ಸೆಪ್ಟೆಂಬರ್ 6 ಪಿತೋರಿ ಅಮಾವಾಸ್ಯೆ: ಭಾದ್ರಪದ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಪಿತೋರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಪಿತೋರಿ ಅಮಾವಾಸ್ಯೆಯು ಸೆಪ್ಟೆಂಬರ್ 6 ರಂದು ಬಂದಿದ್ದು, ಇದನ್ನು ಕುಶಗ್ರಹಣಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ.
ಸೆಪ್ಟೆಂಬರ್ - 9 ಸ್ವರ್ಣ ಗೌರಿ ವ್ರತ: ಪಾರ್ವತಿಯ ಅಪರಾವತಾರವಾದ ಗೌರಿ ದೇವಿಯ ವ್ರತವನ್ನು ಸೆಪ್ಟೆಂಬರ್ 9ರಂದು ಆಚರಿಸಲಾಗುತ್ತಿದೆ. ಈ ಸ್ವರ್ಣ ಗೌರಿ ವ್ರತ ಪುತ್ರ ವಿನಾಯಕ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ. ಶಕ್ತಿ, ಧೈರ್ಯ, ಸ್ಥೈರ್ಯಕ್ಕೆ ಹೆಸರುವಾಗಿಯಾದ ಗೌರಿ ಮಾತೆ ಶಕ್ತಿಯನ್ನು ನಮಗೆ ದಯಪಾಲಿಸಲು ಎಂದು ಮಹಿಳೆಯರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ವರಹಾ ಜಯಂತಿಯೂ ಇದೆ. ಈ ದಿನದಂದು ವಿಷ್ಣುವಿನ ವರಾಹ ಅವತಾರವನ್ನು ಪೂಜಿಸುವುದರಿಂದ ಅನೇಕ ಆಸೆಗಳನ್ನು ಈಡೇರಿಕೆಯಾಗುತ್ತದೆ. ಸೆಪ್ಟೆಂಬರ್ 10 ಗಣೇಶೋತ್ಸವ ಆರಂಭ: ಸಂಭ್ರಮ ಸಡಗರಕ್ಕೆ ಹೆಸರಾಗಿರುವ ಗಣೇಶ ಚತುರ್ಥಿಯನ್ನು ಅಥವಾ ಚೌತಿಯನ್ನು ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು ಮತ್ತು ಈ ದಿನಾಂಕವನ್ನು ಗಣೇಶ ಚತುರ್ಥಿಯೆಂದು ಆಚರಿಸಲಾಗುತ್ತದೆ. ಈ ಬಾರಿ 10 ದಿನಗಳ ಗಣೇಶ ಹಬ್ಬವು ಸೆಪ್ಟೆಂಬರ್ 10 ರಿಂದ ಆರಂಭವಾಗಿ, ವಿಗ್ರಹ ವಿಸರ್ಜನೆಯ ನಂತರ ಅಂದರೆ ಸೆಪ್ಟೆಂಬರ್ 19, ಭಾನುವಾರ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.
ಸೆಪ್ಟೆಂಬರ್ 11 ಋಷಿ ಪಂಚಮಿ: ಋಷಿ ಪಂಚಮಿಯ ಸಂದರ್ಭವನ್ನು ಮುಖ್ಯವಾಗಿ ಸಪ್ತರ್ಷಿಗಳು ಎಂದು ಕರೆಯಲ್ಪಡುವ ಏಳು ಮಹಾನ್ ಮುನಿಗಳಿಗೆ ಅರ್ಪಿಸಲಾಗಿದೆ. ಸಾಮಾನ್ಯವಾಗಿ ಈ ಹಬ್ಬವು ಗಣೇಶ ಚತುರ್ಥಿಯ ಒಂದು ದಿನದ ನಂತರ ಬರುತ್ತದೆ. ಋಷಿ ಪಂಚಮಿಯ ದಿನದಂದು, ಮುನಿಗಳನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿದ ನಂತರ, ಕಥಾ ಪಠಣ ಮತ್ತು ಉಪವಾಸವನ್ನು ಮಾಡಲಾಗುತ್ತದೆ. ಈ ಉಪವಾಸವು ಜನರ ಎಲ್ಲಾ ಪಾಪಗಳನ್ನು ದೂರಮಾಡಿ, ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ
ಸೆಪ್ಟೆಂಬರ್ 13 ಸಂತಾನ ಸಪ್ತಮಿ ವ್ರತ: ಮಕ್ಕಳಿಗಾಗಿ ಈ ಉಪವಾಸವನ್ನು ಭಾದ್ರಪದ ಶುಕ್ಲ ಪಕ್ಷದ ಸಪ್ತಮಿ ತಿಥಿಯ ದಿನದಂದು ಮಾಡಲಾಗುತ್ತದೆ. ಈ ಉಪವಾಸವನ್ನು ಮಧ್ಯಾಹ್ನದವರೆಗೆ ಮಾತ್ರ ಆಚರಿಸಲಾಗುವುದು ಜೊತೆಗೆ, ಮಕ್ಕಳ ರಕ್ಷಣೆಗಾಗಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳಲ್ಲಿ ಈ ದಿನದಂದು ಮಹಾಲಕ್ಷ್ಮಿ ಉಪವಾಸವನ್ನು ಆಚರಿಸಲಾಗುತ್ತದೆ.
ಸೆಪ್ಟೆಂಬರ್ 14 ರಾಧಾಷ್ಟಮಿ, ಮಾಸ ದುರ್ಗಾಷ್ಟಮಿ: ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ದಿನ ಕೃಷ್ಣಪ್ರಿಯೆ ರಾಧೆಯ ಜನ್ಮದಿನವನ್ನು ರಾಧಾಷ್ಟಮಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೃಷ್ಣ ಜನ್ಮಾಷ್ಟಮಿಯ 15 ದಿನಗಳ ನಂತರ ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವವರು ರಾಧೆಯಂತಹ ಪ್ರೀತಿಯನ್ನ ಪಡೆಯುತ್ತಾರೆ ಎಂಬ ನಂಬಿಕೆಯಿದೆ.
ಸೆಪ್ಟೆಂಬರ್ 17 ವಿಶ್ವಕರ್ಮ ಪೂಜೆ, ಏಕಾದಶಿ ಉಪವಾಸ ಸೆಪ್ಟೆಂಬರ್ 19 ಅನಂತ ಚತುರ್ದಶಿ, ಗಣೇಶ ವಿಸರ್ಜನೆ: ಅನಂತ ಚತುರ್ದಶಿಯ ದಿನದಂದು ಅನಂತ ಪದ್ಮನಾಭ ದೇವರನ್ನು ಪೂಜಿಸಲಾಗುತ್ತದೆ, ಹಾಗೆಯೇ ಈ ದಿನ ಉಪ್ಪು ಇಲ್ಲದ ಆಹಾರವನ್ನು ತಿನ್ನುವುದು ಸಂಪ್ರದಾಯವಾಗಿದೆ. ಜೊತೆಗೆ ಈ ದಿನ ಗಣೇಶ ಹಬ್ಬದ ಅಂತ್ಯವಾಗಿದ್ದು, ಗಣೇಶ ವಿಸರ್ಜನೆ ಮಾಡುತ್ತಾರೆ. ಸೆಪ್ಟೆಂಬರ್ 20 ಪೂರ್ಣಿಮಾ ವ್ರತ ಸೆಪ್ಟೆಂಬರ್ 24 ಸಂಕಷ್ಟಿ ಚತುರ್ಥಿ ಸೆಪ್ಟೆಂಬರ್ 29 ಕಾಲಾಷ್ಟಮಿ