HEALTH TIPS

ಬದಿಯಡ್ಕದಲ್ಲಿ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಪ್ರತಿಭಟನೆ: ಮುಸ್ಲಿಂಲೀಗ್ ನೇತೃತ್ವದ ಯುಡಿಎಫ್ ಆಡಳಿತ ಸಂಪೂರ್ಣ ವಿಫಲ - ಹರೀಶ್ ನಾರಂಪಾಡಿ

                      

           ಬದಿಯಡ್ಕ: ಆಡಳಿತ ಪಕ್ಷದ ವೈಫಲ್ಯತೆಯಿಂದ ವಾರ್ಡಿನ ಜನತೆಗೆ ಲಭಿಸಬೇಕಾದ ಅಗತ್ಯ ಸೌಲಭ್ಯಗಳು ದೊರೆಯದಂತಾಗಿದೆ. ನೌಕರರ ಕೊರತೆಯನ್ನು ನೀಗಿಸುವಲ್ಲಿಯೂ ಮುಸ್ಲಿಂಲೀಗ್ ನೇತೃತ್ವದ ಆಡಳಿತ ಪಕ್ಷವು ಸಂಪೂರ್ಣ ವಿಫಲವಾಗಿದೆ. ಎರಡು ವರ್ಷಗಳಿಂದ ಜನತೆಗೆ ಲಭಿಸಬೇಕಾದ ಸೇವೆಗಳು ಲಭಿಸುತ್ತಿಲ್ಲ. ಇಂತಹ ಬೇಜವಾಬ್ದಾರಿತನದ ಆಡಳಿತ ಪಕ್ಷದ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಹೇಳಿದರು.

           ಬದಿಯಡ್ಕ ಗ್ರಾಮಪಂಚಾಯಿತಿ ನೌಕರರ ಕೊರತೆಯನ್ನು ನೀಗಿಸಿ ಜನತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾದ ಆಡಳಿತ ಪಕ್ಷದ ಧೋರಣೆಯ ವಿರುದ್ಧ ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಗ್ರಾಮಪಂಚಾಯಿತಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಗ್ರಾಮಪಂಚಾಯಿತಿಯಲ್ಲಿ ಅಗತ್ಯ ನೌಕರರು ಇದ್ದರೆ ಮಾತ್ರ ಅಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಸಾಧ್ಯವಿದೆ. ಜನರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಉದಾಸೀನ ಪ್ರವೃತ್ತಿಯಿಂದ ಮುನ್ನಡೆಯುತ್ತಿರುವ ಆಡಳಿತ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಜನಸೇವೆಯ ಬದಲು ಜನದ್ರೋಹ ಇಲ್ಲಿ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿ ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ.ಶಂಕರ ಮಾತನಾಡಿ ವಾರ್ಡುಗಳ ದಾರಿದೀಪ ವ್ಯವಸ್ಥೆ, ಲೈಫ್ ಭವನ ಯೋಜನೆ, ಕೃಷಿ ಇಲಾಖೆ ಮೊದಲಾದ ವಿಭಾಗಗಳ ಎಲ್ಲಾ ಚಟುವಟಿಕೆಗಳೂ ಸ್ಥಂಭನಾವಸ್ಥೆಯಲ್ಲಿದೆ. ಇದ್ಯಾವುದಕ್ಕೂ ಆಡಳಿತ ಪಕ್ಷವು ಗಮನಕೊಡುತ್ತಿಲ್ಲ. ಜನತೆಗೆ ಲಭಿಸಬೇಕಾದ ಸವಲತ್ತುಗಳು ಆಡಳಿತ ಪಕ್ಷದ ಬೇಜವಾಬ್ದಾರಿ ತನದ ಆಡಳಿತದಿಂದ ಲಭಿಸುತ್ತಿಲ್ಲವೆಂದು ಆರೋಪಿಸಿದರು. ಮುಖಂಡರಾದ ಕೆ.ಎನ್.ಕೃಷ್ಣ ಭಟ್, ಮೈರ್ಕಳ ನಾರಾಯಣ ಭಟ್ ಮಾತನಾಡಿದರು. ಎಸ್.ಸಿ.ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ, ಕರ್ಷಕ ಮೋರ್ಚಾ ಮಂಡಲ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಪಂ. ಉಪಾಧ್ಯಕ್ಷ ವಿಜಯಸಾಯಿ, ಬ್ಲಾಕ್ ಪಂಚಾಯಿತಿ ಸದಸ್ಯರುಗಳಾದ ಜಯಂತಿ, ಅಶ್ವಿನಿ, ಗ್ರಾಪಂ ಸದಸ್ಯರುಗಳಾದ ಸ್ವಪ್ನಾ, ಅನಿತಾ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಅವಿನಾಶ್ ರೈ ಸ್ವಾಗತಿಸಿ, ಸ್ಥಾಯಿಸಮಿತಿ ಅಧ್ಯಕ್ಷೆ ಸೌಮ್ಯಾ ಮಹೇಶ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries