ಕೊಲ್ಲಂ: ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ ವಿಸ್ಮಯ ಪ್ರಕರಣದ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ವಿಶೇಷ ಅಭಿಯೋಜಕರನ್ನು ನೇಮಿಸಿದೆ. ಕೊಲ್ಲಂನ ಪ್ರಮುಖ ಕ್ರಿಮಿನಲ್ ವಕೀಲ ಜಿ ಮೋಹನ್ ರಾಜ್ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿದೆ. ಜಿ ಮೋಹನ್ ರಾಜ್ ಅವರು ವಿವಾದಿತ ಅಂಚಲ್ ಉತ್ತರ ಕೊಲೆ ಪ್ರಕರಣದ ವಿಶೇಷ ಅಭಿಯೋಜಕರಾಗಿದ್ದರು.
ವಿವಾಹದ ಬಳಿಕ ವಿಸ್ಮಯಳಿಗೆ ಐದು ಬಾರಿ ಹೊಡೆಯಲಾಗಿತ್ತು. ಆಕೆ ಮರಣವನ್ನಪ್ಪಿದ ದಿನ ಹೊಡೆದಿರಲಿಲ್ಲ ಎಂದು ಆರೋಪಿ ಸಾಕ್ಷಿ ಹೇಳಿದ್ದಾನೆ. ತನಿಖಾ ತಂಡವು ವಿಸ್ಮಯಳ ಸ್ನೇಹಿತರು ಮತ್ತು ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಮರಣೋತ್ತರ ಪರೀಕ್ಷೆಯ ವರದಿಯು ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೋಲೀಸರು ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.
ವಿಸ್ಮಯಳ ಕುಟುಂಬವು ಮೋಹನ್ ರಾಜ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸುವಂತೆ ಕೋರಿತ್ತು. ವಿಸ್ಮಯ ಅವರ ಕುಟುಂಬವು ಮುಖ್ಯಮಂತ್ರಿಯನ್ನು ವೈಯಕ್ತಿಕವಾಗಿ ಭೇಟಿ ಮಾಡಿತ್ತು. ಲೀಸರು ಸೂಚಿಸಿದ ಪಟ್ಟಿಯಲ್ಲಿ ಮೋಹನ್ ರಾಜ್ ಅವರನ್ನೂ ಪರಿಗಣಿಸಲಾಗಿದೆ.