ಮಂಜೇಶ್ವರ; ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತೆಗೆ ವಿವಿಧ ಯೋಜನೆಗಳ ನ್ನು ಕಾರ್ಯಗತಗೊಳಿಸಲು ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪೂರ್ಣ ಪ್ಲಾಸ್ಟಿಕ್ ನಿಷದಕ್ಕೆ ಆದ್ಯತೆ ನೀಡಿ ಜಾರಿಗೊಳಿಸಲು ಪಂಚಾಯತ್ ಆಡಳಿತಕ್ಕೆ ಸ್ಥಾಯಿ ಸಮಿತಿ ಮನವಿ ಮಾಡಿದೆ.
ಗ್ರಾಮ ಪಂಚಾಯತ್ ತೆರಿಗೆ ಕಟ್ಟದೆ ಅನೇಕ ವರ್ಷ ಗಳಿಂದ ವ್ಯಾಪಾರ ,ಮಾಡುವ ವ್ಯಾಪರಿಗಳು ತೆರಿಗೆ ಕಟ್ಟದೆ ಇದ್ದರೆ ಕಾನೂನು ಕ್ರಮ ಜರಾಗಿಸಲು ತೀರ್ಮಾನಿಸಲಾಗಿದೆ. ಅನುಮತಿ ಇಲ್ಲದೆ ಅನಧಿಕೃತವಾಗಿ ತೆರೆದಿರುವ ಗೂಡಂಗಡಿ ಗಳನ್ನು ಪಂಚಾಯತ್ ಆದೇಶ ನೀಡುವ ವರೆಗೆ ,ಹಾಗೂ ವ್ಯಾಪಾರಸ್ಥರು ತ್ಯಾಜ್ಯ ವಿಲೇವಾರಿಗೆ ಒತ್ತು ನೀಡಬೇಕೆಂದು ಸಭೆ ಅಗ್ರಹಿಸಿತು.
ರಸ್ತೆ ಬದಿಗಳಲ್ಲಿ ,ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಎಸೆಯುವವರನ್ನು ನಿಯಂತ್ರಣ ಮಾಡಲು ಪೋಲೀಸ್ ಇಲಾಖೆಯಲ್ಲಿ ತಿಳಿಸಲಾಗಿದೆ. ಹಾಗೂ ಹೊಸಂಗಡಿ ,ಕುಂಜತ್ತೂರು ಪ್ರದೇಶ ಕೇಂದ್ರೀಕರಿಸಿ ಸಿ.ಸಿ. ಕ್ಯಾಮರಾ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶೆಣೈ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನ ಮೊಂತೆರೋ ಉದ್ಘಾಟಿಸಿ ಮಾತನಾಡಿದರು.
ಸ್ಥಾಯಿ ಸಮಿತಿ ಸದಸ್ಯರಾದ ಆದರ್ಶ್ ಬಿಎಂ, ಸಮೀರಾ ಚೆರ್ಕಳ, ಜೈಬುನ್ನೀಸ, ಲಕ್ಷಣ್ ಕುಂಜತ್ತೂರು, ಅಧಿಕಾರಿಗಳಾದ ನಾಸಿರ್, ಕೃಷ್ಣ ಪ್ರಿಯ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್ ಕನಿಲ, ಕಾರ್ಯದರ್ಶಿ ದಯಾನಂದ ಉಪಸ್ಥಿತರಿದ್ದರು.