ಕಾಸರಗೋಡು: ಕೋವಿಡ್-19 ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಓಣಂ ಹಬ್ಬ ಆಚರಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿತು.
ಜಿಲ್ಲಾ ಮಡಿಕಲ್ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ದೌತ್ಯ, ಯುನಿಸೆಫ್ ಜಂಟಿ ವತಿಯಿಂದ ಅಭಿಯಾನ ಜರುಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ಆ.28 ವರೆಗೆ ಜಿಲ್ಲೆಯ ಪ್ರಧಾನ ಪೇಟೆಗಳಲ್ಲಿ ವಾಹನಗಳ ಮೂಲಕ ಜಾಗೃತಿ ನಡೆಸಲಾಗುತ್ತಿದೆ. 'ಕೋವಿಡ್ ಮರೆಯದೆ ನಡೆಸೋಣ ಓಣಂ' ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಪ್ರಚಾರ ನಡೆಸಲಾಗುತ್ತಿದೆ.
ವಾಹನಗಳಲ್ಲಿ ಪ್ರತಿರೋಧ ಸಂದೇಶ ನೀಡುವ ಡಿಜಿಟಲ್ ಭಿತ್ತಿಪತ್ರ, ಎಲ್.ಇ.ಡಿ.ವಾಲ್, ವಿವಿಧ ಜಾಗೃತಿಗಳ ಕಿರು ವೀಡಿಯೋಗಳು ಇತ್ಯಾದಿಗಳ ಪ್ರದರ್ಶನ ನಡೆಸಲಾಗುತ್ತಿದೆ. ಅಂಗಡಿಗಳು, ಮಾರುಕಟ್ಟೆ, ಹೋಟೆಲ್ ಗಳು ಇತ್ಯಾದಿ ಕಡೆ ಜಾಗೃತಿ ಸಂದೇಶದ ಕಿರು ಹೊತ್ತಗೆ ಹಂಚುವ ಮಹಾಬಲಿ ಮಹಾರಾಜನ ವೇಷಧಾರಿ ವಾಹನದಲ್ಲಿರಲಿದ್ದಾರೆ.
ರಾಷ್ಟ್ರೀಯ ಆರೋಗ್ಯ ದೌತ್ಯ ಕಚೇರಿಯಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ದೌತ್ಯದ ಜಿಲ್ಲಾ ಪ್ರಭಾರ ಪೆÇ್ರೀಗ್ರಾಂ ಮೆನೆಜರ್ ಡಾ.ಎ.ವಿ.ರಾಮದಾಸ್ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಕೋವಿಡ್-19 ಇನ್ಫ್ರಾಸ್ಟ್ರಕ್ಚರ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರಿಜಿತ್ ಕೃಷ್ಣನ್, ಜಿಲ್ಲಾ ಶಿಕ್ಷಣ ಮತ್ತು ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಜಿಲ್ಲಾ ನಿಯಂತ್ರಣ ಕೊಠಡಿ ಕಿರಿಯ ಆರೋಗ್ಯ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ಪಿ.ವಿ. ಉಪಸ್ಥಿತರಿದ್ದರು.