HEALTH TIPS

ಖಾಸಗಿ ಸಹಭಾಗಿತ್ವ ಹೆಚ್ಚಿಸಲು ಆಯುಷ್ಮಾನ್ ಭಾರತ್ ಅಡಿಯಲ್ಲಿ ದರಗಳನ್ನು ಪರಿಷ್ಕರಿಸಲು ಕೇಂದ್ರ ಸರಕಾರ ಚಿಂತನೆ

               ನವದೆಹಲಿ:ಆರೋಗ್ಯ ಸೌಲಭ್ಯದ ಪ್ಯಾಕೇಜ್‌ಗಳ ದರಗಳನ್ನು ಪರಿಷ್ಕರಿಸುವ ಮೂಲಕ ಆಯುಷ್ಮಾನ್ ಭಾರತ್-ಜನ್ ಆರೋಗ್ಯ ಯೋಜನೆಗೆ (ಜೆಎವೈ) ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರಕಾರವು ಯೋಜಿಸುತ್ತಿದೆ ಎಂದು ವರದಿಯಾಗಿದೆ.

            ಆಯುಷ್ಮಾನ್ ಭಾರತ್-ಜೆಎವೈ ನಿಗದಿಪಡಿಸಿದ ಚಿಕಿತ್ಸೆಯ ದರಗಳು ಕಾರ್ಯಸಾಧ್ಯವಲ್ಲ. ಹೀಗಾಗಿ ಇದು ತಮ್ಮ ಭಾಗವಹಿಸುವಿಕೆಗೆ ಅಡ್ಡಿಯಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ನಂತರ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆಯಲ್ಲಿ ಭಾಗವಹಿಸುವ ಆಸ್ಪತ್ರೆಗಳಿಗೆ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

             "ದರಗಳನ್ನು ಪರಿಷ್ಕರಿಸಲಾಗುವುದು. ಆದರೆ ಆಸ್ಪತ್ರೆಗಳಿಗೆ ಅವು ಹೆಚ್ಚು ಲಾಭದಾಯಕವಾಗುವ ಮಟ್ಟಿಗೆ ಅಲ್ಲ. ತಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ಈ ಕ್ರಮಗಳನ್ನು ಕೈಗೊಳ್ಳಲಾಗುವುದು'' ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್ ಎಚ್ ಎ) ಸಿಇಒ ಆರ್.ಎಸ್. ಶರ್ಮಾ ಹೇಳಿದರು.

           ಈ ಯೋಜನೆಯಲ್ಲಿ ಕ್ಲೈಮ್ ಸೆಟಲ್ಮೆಂಟ್ ವ್ಯವಸ್ಥೆಯನ್ನು ತಿದ್ದುಪಡಿ ಮಾಡುವ ಮೂಲಕ ಖಾಸಗಿ ಆಸ್ಪತ್ರೆಗಳ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಎನ್‌ಎಚ್‌ಎಯ ಉಪ ಸಿಇಒ ವಿಪುಲ್ ಅಗರ್ವಾಲ್ ಹೇಳಿದ್ದಾರೆ.

             ಎನ್ ಎಚ್ ಎ ಯೋಜನೆಯನ್ನು ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನವನ್ನು ಹೆಚ್ಚಿಸಲು ನಿವೃತ್ತ ಸರಕಾರಿ ಅಧಿಕಾರಿಯ ನೇತೃತ್ವದಲ್ಲಿ ಜಂಟಿ ಪರಿಶೀಲನಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಯೋಜಿಸಿದೆ.

           ಆಯುಷ್ಮಾನ್ ಭಾರತ್-ಜನ ಆರೋಗ್ಯ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2018 ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿದರು ಮತ್ತು ಇದುವರೆಗೆ ಸುಮಾರು 23,000 ಆಸ್ಪತ್ರೆಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಅದರಲ್ಲಿ 40 ಶೇ. ಖಾಸಗಿ ವಲಯಕ್ಕೆ ಸೇರಿವೆ. ಈ ಯೋಜನೆಯು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಉಚಿತ ಆರೋಗ್ಯವಿಮಾ ರಕ್ಷಣೆ ನೀಡುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries