ಕಾಸರಗೋಡು: ಕೇಂದ್ರ ಸರ್ಕಾರದ ಕೃಷಿಕ ವಿರೋಧಿ ನೀತಿ ಹಾಗೂ ಇಂಧನ ಬೆಲೆಯೇರಿಕೆ ಖಂಡಿಸಿ ಜನತಾ ದಳ(ಎಸ್)ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಮುಖ್ಯ ಅಂಚೆ ಕಚೇರಿ ಎದುರು ಧರಣಿ ನಡೆಯಿತು.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್‍ಕುಮಾರ್ ಧರಣಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಕೆ.ಎ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಖಾಲಿದ್ ಕೊಳವಯಲ್, ಸತೀಶ್ ಶೆಟ್ಟಿ, ರಘುರಾಮ್ ಚತ್ರಂಪಳ್ಳ, ಹರೀಶ್ ಉಚ್ಚಿಲ್, ಸಿ.ಎಂ ದೀಕ್ಷಿತ್ ಉಪಸ್ಥಿತರಿದ್ದರು. ಮಂಡಲ ಸಮಿತಿ ಅಧ್ಯಕ್ಷ ಹಮೀದ್ ಕೋಸ್ಮೋಸ್ ಸ್ವಾಗತಿಸಿದರು.