ಕಾಸರಗೋಡು: ವಿಶ್ವ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ತಿರುವೋಣಂ ಹಬ್ಬವನ್ನು ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆ ( ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ) ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು. ಈ ಸಂದರ್ಭ ಹೂವಿನ ರಂಗೋಲಿ ರಚಿಸುವ ಮೂಲಕ ಹಬ್ಬಾಚರಣೆ ನಡೆಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರು ರಂಗೋಲಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಸಹಾಯಕ ಸಂಪಾದಕ ಪಿ.ಪಿ.ವಿನೀಷ್, ಸಹಾಯಕ ಮಾಹಿತಿ ಅಧಿಕಾರಿ ಪ್ರದೀಪ್ ಜಿ.ಎನ್., ಕನ್ನಡ ವಿಭಾಗ ಸಹಾಯಕ ಮಾಹಿತಿ ಅಧಿಕಾರಿ ವೀಜಿ.ಕಾಸರಗೋಡು, ಸಿಬ್ಬಂದಿ ಕೆ.ಪ್ರಸೀದಾ, ಟಿ.ಕೆ.ಕೃಷ್ಣನ್, ಪಿ.ಕೆ.ಆರ್.ಮನೋಜ್, ಆಖಿನ್ ಮರಿಯಾ, ದೀಕ್ಷಿತಾ, ದಿಲ್ನಾ, ಅನಿತಾ ಬಾಬು, ಛಾಯಾಗ್ರಾಹಕ ಅಚ್ಚು ಮೊದಲಾದವರು ನೇತೃತ್ವ ನೀಡಿದರು.