ಮಂಜೇಶ್ವರ: ಕೆರೆಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ. ತೂಮಿನಾಡು ಸಮೀಪದ ಶೇಖರ ಕೆರೆಯಲ್ಲಿ ಮಂಗಳವಾರ ಸಂಜೆ 6 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ತಲಪಾಡಿ ನಾರ್ಲಾ ಪಡೀಲ್ ನಿವಾಸಿ ರಾಜೇಶ್ ಶೆಟ್ಟಿ (೫೪) ಸಾವನ್ನಪ್ಪಿದ ದುರ್ದೈವಿ. ಬಹುತೇಕ ದಿನಗಳಲ್ಲೂ ಈಜಲು ಆಗಮಿಸುತ್ತಿರುವ ರಾಜೇಶ್ ಶೆಟ್ಟಿ ಮಂಗಳವಾರ ಈಜಲು ಆಗಮಿಸಿದ್ದು, ಕೆಸರಿನಲ್ಲಿ ಹೂತು ಹೋಗಿ ಸಾವು ಸಂಭವಿಸಿರಬಹುದಾಗಿ ಶಂಕಿಸಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದೆ.