ತಿರುವನಂತಪುರಂ: ಕೆಲವು ಮಾಧ್ಯಮಗಳು ತಾಲಿಬಾನ್‌ಗಳಿಗೆ ವೀರತ್ವವನ್ನು ನೀಡಲು ಪ್ರಯತ್ನಿಸಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ಅಫ್ಘಾನ್ ಎಲ್ಲರಿಗೂ ಒಂದು ಪಾಠ. ಪಾಠವೆಂದರೆ ಧಾರ್ಮಿಕ ಉಗ್ರವಾದದ ಬೆಂಕಿಗೆ ಸಿಲುಕಿಕೊಂಡರೆಂದರೆ, ಮನುಷ್ಯ ಅದರಲ್ಲಿ ಉರಿದು ನಾಶವಾಗುತ್ತಾನೆ. "ಅವರು ಹೇಗೆ ಬೆಳೆದರು ಮತ್ತು ಯಾರು ಬೆಳೆಸಿದರು ಎಂಬುದು ಎಲ್ಲರಿಗೂ ತಿಳಿದಿದೆ" ಎಂದು ಮುಖ್ಯಮತ್ರಿ ಹೇಳಿದರು.
ದಾರ್ಶನಿಕ ಶ್ರೀ ನಾರಾಯಣ ಗುರುಗಳ 167 ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ದಿನಮಾನದಲ್ಲಿ ಮಾನವೀಯತೆ ತುಂಬಿರುವ ಗುರುವಿನ ಮಾತುಗಳಿಗೆ ಹೆಚ್ಚಿನ ಪ್ರಸ್ತುತತೆ ಇದೆ ಎಂದು ಮುಖ್ಯಮಂತ್ರಿ ಹೇಳಿದರು. ಜಾತಿ ಮತ್ತು ಧರ್ಮವನ್ನು ಮೀರಿದ ಮಾನವೀಯತೆಯನ್ನು ಎತ್ತಿಹಿಡಿದು ನಾವು ಮುಂದೆ ಸಾಗಬೇಕು. ಆಗ ಮಾತ್ರ ನಾವು ಗುರುಗಳನ್ನು ಪ್ರೀತಿಸುತ್ತೇವೆ ಎಂದು ಹೇಳಬಹುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನೇಕ ಗುರುಗಳು ಇದ್ದಾರೆ. ಆದರೆ ಕೃತಿಯ ಮೂಲಕ ತನ್ನ ತಾಯ್ನಾಡಿನ ಇತಿಹಾಸವನ್ನು ಯಶಸ್ವಿಯಾಗಿ ಪುನಃ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಶ್ರೀ ನಾರಾಯಣ ಗುರುಗಳು ಎಂದು ಮುಖ್ಯಮಂತ್ರಿ ತಿಳಿಸಿದರು.
ಜಾತಿಯನ್ನು ಮೀರಿದ ಮಾನವೀಯತೆಯಲ್ಲಿ ಗುರುವಿನ ಅನುಸಂಧಾನವನ್ನು ಉಳಿಸಿಕೊಳ್ಳಬಹುದೇ ಎಂದು ನಾವು ಯೋಚಿಸಬೇಕಾಗಿದೆ. ಕೇವಲ ಒಂದು ನಿರ್ದಿಷ್ಟ ಜಾತಿ ಅಥವಾ ಒಂದು ನಿರ್ದಿಷ್ಟ ಧರ್ಮ ಸಾಕು ಎಂದು ಗುರುಗಳು ಹೇಳಿಲ್ಲ. ಪೈಪೋಟಿ ಬೆಳೆಸಲು ಪ್ರಯತ್ನಿಸುವವರ ವಿರುದ್ಧ ಗುರುಗಳು ಸಂದೇಶವನ್ನು ಮುಂದಿಡುತ್ತಾರೆ. ಮಾನವೀಯತೆಯ ಉಳಿವು ಗುರುಗಳು ತೋರಿಸಿದ ಮಾರ್ಗದ ಮೂಲಕ ಎಂದು ಮುಖ್ಯಮಂತ್ರಿ ಹೇಳಿದರು.