ಬಿಕಾನೇರ್ : ಈಗಿಗ ಪಾರಿವಾಳಗಳು ಎಲ್ಲೆಲ್ಲಿಂದಲೋ ಹಾರಿ ಬಂದು ನಿಗೂಢವಾಗಿ ತಿರುಗಾಡುವುದು ಸಾಮಾನ್ಯ ಎಂಬಂತಾಗಿದೆ. ಇಂಥದ್ದೇ ಒಂದು ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.
ಭಾರತದ ಗಡಿಯೊಳಕ್ಕೆ ನಿಗೂಢ ಎನಿಸುವ ರೀತಿಯಲ್ಲಿ ಪಾರಿವಾಳ ಹಾರಿ ಬಂದಿತ್ತು. ಅದನ್ನು ಗಮನಿಸಿದಾಗ ಪಾಕಿಸ್ತಾನದ ಪಾರಿವಾಳ ಎಂಬ ಶಂಕೆ ಮೂಡಿತ್ತು. ನಂತರ ಅದನ್ನು ಸೇನಾಧಿಕಾರಿಗಳು ಸೆರೆ ಹಿಡಿದು ನೋಡಿದಾಗ ಅದರ ಕುತ್ತಿಗೆ ಮತ್ತು ಒಂದು ಕಾಲಿಗೆ ಉಂಗುರ ಇತ್ತು. ಅದರಲ್ಲಿ ಒಂದು ಚೀಟಿ ಇತ್ತು. ಅದನ್ನು ನೋಡಲಾದ ಪಾಕಿಸ್ತಾನದ ಮೊಬೈಲ್ ನಂಬರ್ ಇರುವುದು ಕಂಡುಬಂದಿದೆ.ಮಹಾಜನ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜನ ಪ್ರದೇಶದ ಬಳಿ ಈ ಪಾರಿವಾಳ ಹಾರಾಟ ನಡೆಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾರಿವಾಳವನ್ನು ಮೊದಲ ಗ್ರಾಮಸ್ಥರು ನೋಡಿದ್ದಾರೆ. ಅದರಲ್ಲಿದ್ದ ಚೀಟಿ ಅವರ ಗಮನಕ್ಕೆ ಹೋಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಹಿಡಿಯುವಲ್ಲಿ ಸೇನೆಯ ನೆರವು ಪಡೆಯಲಾಗಿದ್ದು, ಅಂತೂ ಪಾರಿವಾಳ ಸೆರೆ ಸಿಕ್ಕಿತು. ನಂತರ ಅದನ್ನು ನೋಡಿದಾಗ ಪಾಕಿಸ್ತಾನದ ಮೊಬೈಲ್ ನಂಬರ್ ಕಂಡುಬಂದಿದೆ. ಮಹಾಜನ್ ಫೈರಿಂಗ್ ರೇಂಜ್ನಲ್ಲಿ ಭದ್ರತಾ ಪಡೆಗಳು ಸಕ್ರಿಯವಾಗಿರುವುದರಿಂದ ಎಚ್ಚರಿಕೆ ನೀಡಲಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾರಿವಾಳಗಳು ಮತ್ತು ಪಾಕಿಸ್ತಾನದ ಸಂದೇಶಗಳಿರುವ ಬಲೂನುಗಳು ಕಂಡುಬಂದಿರುವ ಇಂತಹ ಅನೇಕ ಘಟನೆಗಳನ್ನು ಭದ್ರತಾ ಸಂಸ್ಥೆಗಳು ಈ ಹಿಂದೆಯೂ ವರದಿ ಮಾಡಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಗೂಢ ಪಾರಿವಾಳದ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.