ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾನಿಲಯದಲ್ಲಿ ಇತ್ತೀಚೆಗೆ ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಚಿನ್ಮಯ ವಿದ್ಯಾಮಂದಿರದಲ್ಲಿ ಶಾಂತಿಮಂತ್ರ, ಗುರು ಸ್ತೋತ್ರಗಳೊಂದಿಗೆ ಪ್ರಾರಂಭಗೊಂಡ ಆರಾಧನೆ ಗೀತಾಧ್ಯಾನ ಶ್ಲೋಕ ಹಾಗೂ ಗುರು ಭಜನೆಯೊಂದಿಗೆ ಮುಕ್ತಾಯಗೊಂಡಿತು.
ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಗುರುಪೂರ್ಣಿಮೆಯ ಮಹತ್ವದ ಬಗ್ಗೆ ಆಶೀರ್ವಚನ ನೀಡಿದರು. ಸ್ವಾಮಿ ಅಖಿಲೇಶ್ ಚೈತನ್ಯ ಅವರು ವೇದವ್ಯಾಸ ಅಷ್ಟೋತ್ತರ ಅರ್ಚನೆಯನ್ನು ನಡೆಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಬಗ್ಗೆ ವೀಡಿಯೋ ಹಾಗೂ ಭಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾಲಯದ ಪ್ರಾಂಶುಪಾಲೆ ಸಂಗೀತಾ ಪ್ರಭಾಕರನ್, ಮುಖ್ಯೋಪಾಧ್ಯಾಯಿನಿಯರಾದ ಸಿಂಧು ಶಶೀಂದ್ರನ್, ಪೂರ್ಣಿಮಾ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.