ಕೊಚ್ಚಿ: ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಟೀಕಿಸಿದ್ದಕ್ಕಾಗಿ ಆರು ಮಂದಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಸುರೇಂದ್ರನ್ ವಿರುದ್ಧ ಸಾರ್ವಜನಿಕ ಟೀಕೆಗಳನ್ನು ಮಾಡಿದ್ದ ಆರುಮಂದಿ ಪ್ರಮುಖರನ್ನು ಉಚ್ಚಾಟಿಸಲಾಗಿದೆ. ಇದರಲ್ಲಿ ಕೊಡಕರ ಮನಿ ಲಾಂಡರಿಂಗ್ ಪ್ರಕರಣದ ಸಂಬಂಧಪಟ್ಟ ಹೇಳಿಕೆಯ ಅನುಸಾರ ಇಂತಹ ಕ್ರಮ ಉಂಟಾಗಿದೆ.
ಯುವ ಮೋರ್ಚಾದ ಮಾಜಿ ರಾಜ್ಯ ಸಮಿತಿ ಸದಸ್ಯರು ಮತ್ತು ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಾರ್ವಜನಿಕ ಟೀಕೆಗಳನ್ನು ಎತ್ತಿದವರ ವಿರುದ್ಧ ನಾಯಕತ್ವವು ಕ್ರಮಕ್ಕೆ ಇದೀಗ ಮುಂದಾಗಿದೆ. ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಆರ್.ಅರವಿಂದನ್ ಮತ್ತು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಎನ್.ಗಂಗಾಧರನ್ ಸೇರಿದಂತೆ ಆರು ಜನರನ್ನು ಕೊಡಕರ ವಿಚಾರದಲ್ಲಿ ಸುರೇಂದ್ರನ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ವಜಾ ಮಾಡಲಾಗಿದೆ.
ಚುನಾವಣಾ ಪ್ರಚಾರದ ಸಂದರ್ಭ ಪಕ್ಷದ ನಾಯಕರ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕಾಗಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಧಿಕೃತ ಪ್ರತಿಕ್ರಿಯೆ. ಪೋಸ್ಟರ್ ಗಳಲ್ಲಿ ಆರೋಪಗಳು ಚುನಾವಣಾ ನಿಧಿಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಮತ್ತು ಮತ ಖರೀದಿ ನಡೆಯುತ್ತಿದೆ ಎಂಬ ವಾದವನ್ನು ಎತ್ತಿ ಹಿಡಿದಿದೆ.
ಇದೇ ವೇಳೆ, ಪಕ್ಷದಿಂದ ಉಚ್ಚಾಟನೆಗೊಳಿಸಿದ ಪತ್ರದ ನಂತರ ಅವರು ನಾಯಕತ್ವದ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಚ್ಚಾಟಿತರು ನಾಯಕರ ಶವಪೆಟ್ಟಿಗೆಯನ್ನು ಸುಟ್ಟು ಪ್ರತಿಭಟಿಸಿದರು.