ಬದಿಯಡ್ಕ: ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಿಂದ ಶ್ರೀ ಎಡನೀರು ಮಠ ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಸಹಯೋಗದೊಂದಿಗೆ ಡಾ.ರಮಾನಂದ ಬನಾರಿ ಮಂಜೇಶ್ವರ ಅವರ ಭಗವದ್ಗೀತೆ ನಾನು ಕಂಡಂತೆ ಹಾಗು ನದಿ ಹರಿಯುತ್ತಲೇ ಇದೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಎಡನೀರು ಮಠದಲ್ಲಿ ಶನಿವಾರ ಸಂಜೆ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಭಗವದ್ಗೀತೆ ನಾನು ಕಂಡಂತೆ ಕೃತಿಯನ್ನು ಮತ್ತು ನದಿ ಹರಿಯುತ್ತಲೇ ಇದೆ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವಿಶ್ರಾಂತ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅತಿಥಿಯಾಗಿ ಭಾಗವಹಿಸಿದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರು ಭಗವದ್ಗೀತೆ ನಾನು ಕಂಡಂತೆ ಕೃತಿಯನ್ನು ಹಾಗು ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ನದಿಹರಿಯುತ್ತಲೇ ಇದೆ ಕೃತಿಯ ಬಗ್ಗೆ ಮಾತನಾಡಿದರು. ಕೃತಿಕಾರ ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ಮಾತನಾಡಿದರು. ಸಂಘಟಕ ಚಂದ್ರಶೇಖರ ಏತಡ್ಕ ಸ್ವಾಗತಿಸಿ, ವೆಂಕಟರ್ ಭಟ್ ಎಡನೀರು ವಂದಿಸಿದರು. ಪ್ರೊ. ಪಿ.ಎನ್.ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.