HEALTH TIPS

ಕೋವಿಡ್ ವಿರುದ್ಧ ಹೋರಾಡಲು ಭಾರತಕ್ಕೆ ಮತ್ತಷ್ಟು ಬಲ: ಜಾನ್ಸನ್​ ಆಯಂಡ್​ ಜಾನ್ಸನ್​ ಸಿಂಗಲ್ ಡೋಸ್ ಲಸಿಕೆ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ

         ನವದೆಹಲಿ: ಕೋವಿಡ್ ವಿರುದ್ಧ ಹೋರಾಡಲು ಅಮೆರಿಕಾ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಸಿಂಗಲ್ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶನಿವಾರ ತಿಳಿದುಬಂದಿದೆ.


           ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, 'ಭಾರತದಲ್ಲಿ ಜಾನ್ಸನ್​ ಆಯಂಡ್​ ಜಾನ್ಸನ್ ಸಿಂಗಲ್ ಡೋಸ್ ಕೋವಿಡ್ 19 ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಭಾರತ ಈಗ ಐದು ಇಯುಎ ಲಸಿಕೆಗಳನ್ನು ಹೊಂದಿದಂತಾಗಿದೆ. ಇದು ಕೋವಿಡ್ ವಿರುದ್ಧದ ಭಾರತದ ಸಮಗ್ರ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ' ಎಂದು ಹೇಳಿದ್ದಾರೆ.

        ಜಾನ್ಸನ್​ ಆಯಂಡ್​ ಜಾನ್ಸನ್ ಸಂಸ್ಥೆಯು ತನ್ನ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆ ಅನುಮೋದನೆ (ಇಯುಎ) ಕೋರಿ ಮನವಿ ಮಾಡಿತ್ತು. ಅದಕ್ಕೆ ಶನಿವಾರ ಒಪ್ಪಿಗೆ ದೊರಕಿದೆ.

     ಆಗಸ್ಟ್ 5ರಂದು ಜಾನ್ಸನ್​ ಆಯಂಡ್​ ಜಾನ್ಸನ್ ಇಯುಎಗೆ ಅರ್ಜಿ ಸಲ್ಲಿಸಿತ್ತು. ಭಾರತದಲ್ಲಿ ಬಯಾಲಾಜಿಕಲ್ ಇ ಕಂಪನಿಯೊಂದಿಗೆ ಸೇರಿ ಲಸಿಕೆಗಳನ್ನು ಕಂಪನಿ ಉತ್ಪಾದಿಸಲಿದೆ. ಈ ಲಸಿಕೆಯು ಒಂದೇ ಡೋಸ್ ಹೊಂದಿದ್ದು, ಶೇ 85ರಷ್ಟು ಪರಿಣಾಮಕಾರಿ ಎಂಬ ಫಲಿತಾಂಶ ನೀಡಿದೆ ಎಂದು ಕಂಪನಿ ತಿಳಿಸಿತ್ತು.

       ಭಾರತವು ಈವರೆಗೂ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಹಾಗೂ ಮಾಡೆರ್ನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಪಟ್ಟಿಗೆ ಇದೀಗ ಜಾನ್ಸನ್​ ಆಯಂಡ್​ ಜಾನ್ಸನ್ ಲಸಿಕೆ ಕೂಡ ಹೊಸದಾಗಿ ಸೇರ್ಪಡೆಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries