HEALTH TIPS

ಹುರಿಯತ್‌ ಕಾನ್ಫರೆನ್ಸ್‌ನ ಎರಡೂ ಬಣಗಳ ನಿಷೇಧ ಸಾಧ್ಯತೆ

            ಶ್ರೀನಗರಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ಸಂಘಟನೆಯಾದ ಹುರಿಯತ್‌ ಕಾನ್ಫರೆನ್ಸ್‌ನ ಎರಡೂ ಬಣಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ನಿಷೇಧಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

          ಸಂಘಟನೆಯ ಈ ಎರಡೂ ಬಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ದಶಕಗಳಿಂದ ಪ್ರತ್ಯೇಕತಾ ಚಳವಳಿಯನ್ನು ನಡೆಸುತ್ತಿವೆ.

           ಪಾಕಿಸ್ತಾನದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಕಾಶ್ಮೀರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಹುರಿಯತ್‌ ಕಾನ್ಫರೆನ್ಸ್‌ನ ಭಾಗವಾಗಿದ್ದ ಕೆಲವು ಸಂಘಟನೆಗಳು ಈ ಹಣವನ್ನು ಸಂಗ್ರಹಿಸುತ್ತಿದ್ದವಲ್ಲದೇ, ಆ ಹಣವನ್ನು ಉಗ್ರ ಸಂಘಟನೆಗಳಿಗೆ ನೀಡುತ್ತಿದ್ದವು ಎಂಬುದು ಇತ್ತೀಚೆಗೆ ಎನ್‌ಐಎ ನಡೆಸಿದ ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

'ಹುರಿಯತ್‌ ಕಾನ್ಫರೆನ್ಸ್‌ ಸದಸ್ಯರು ನಿಷೇಧಿತ ಉಗ್ರ ಸಂಘಟನೆಗಳಾದ ಹಿಜ್ಬುಲ್‌ ಮುಜಾಹಿದೀನ್‌, ದುಖ್ತರನ್‌-ಎ-ಮಿಲ್ಲತ್‌ ಹಾಗೂ ಲಷ್ಕರ್‌-ಎ-ತಯಬಾ ಜೊತೆ ಕೈಗೂಡಿಸಿದ್ದರು ಎಂಬುದು ಸಹ ತನಿಖೆಯಿಂದ ಗೊತ್ತಾಗಿತ್ತು. ಈ ಆಧಾರದಲ್ಲಿ ಹುರಿಯತ್‌ ಕಾನ್ಫರೆನ್ಸ್‌ ಅನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದೂ ಅಧಿಕಾರಿಗಳು ಹೇಳಿದ್ದಾರೆ.

         'ಭದ್ರತಾ ಪಡೆಗಳ ಮೇಲೆ ಕಲ್ಲುಗಳನ್ನು ಎಸೆಯಲು, ಶಾಲೆಗಳನ್ನು ಸುಡಲು, ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯನ್ನುಂಟು ಮಾಡಲು ಹಾಗೂ ಭಾರತದ ವಿರುದ್ಧ ಯುದ್ಧ ಹೂಡಲು ಈ ಹಣವನ್ನು ಬಳಸಲಾಗುತ್ತಿತ್ತು' ಎಂದು ಅಧಿಕಾರಿಗಳು ಹೇಳಿದ್ದಾರೆ.

          26 ಪ್ರತ್ಯೇಕತಾ ಗುಂಪುಗಳು ಒಟ್ಟಿಗೆ ಸೇರಿ 1993ರಲ್ಲಿ ಹುರಿಯತ್‌ ಕಾನ್ಫರೆನ್ಸ್‌ ರಚಿಸಿದ್ದವು. 2005ರಲ್ಲಿ ಈ ಸಂಘಟನೆ ಎರಡು ಬಣಗಳಾಗಿ ಒಡೆಯಿತು. ಮಿರ್ವೇಜ್‌ ಸೌಮ್ಯವಾದಿಗಳ ಗುಂಪಿನ ನಾಯಕನಾದರೆ, ಸೈಯದ್‌ ಅಲಿ ಶಾ ಗಿಲಾನಿ ಕಟ್ಟಾವಾದಿಗಳ ಗುಂಪಿನ ನಾಯಕನಾಗಿದ್ದ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries